IPL 2022 | ಐಪಿಎಲ್ ನಲ್ಲಿ ರವಿಚಂದ್ರನ್ ಅಶ್ವಿನ್ ದಾಖಲೆ
ರಾಜಸ್ಥಾನ್ ರಾಯಲ್ಸ್ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್‌ನಲ್ಲಿ 150 ವಿಕೆಟ್‌ಗಳ ಮೈಲುಗಲ್ಲನ್ನು ತಲುಪಿದ್ದಾರೆ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರನ್ನು ಪೆವಿಲಿಯನ್ ಗೆ ಕಳುಹಿಸುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.
ಇನಿಂಗ್ಸ್‌ನ ಹತ್ತನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಅವರು.. ತಮ್ಮ ಸ್ಪಿನ್‌ನಿಂದ ಯುವ ಬ್ಯಾಟ್ಸ್‌ಮನ್ ಪಟೀದಾರ್ ಅವರನ್ನು ಔಟ್ ಮಾಡಿದರು.
ಈ ಮೂಲಕ ಹರ್ಭಜನ್ ಸಿಂಗ್ ನಂತರ ಐಪಿಎಲ್ ನಲ್ಲಿ 150 ವಿಕೆಟ್ ಕಬಳಿಸಿದ ಎರಡನೇ ಆಫ್ ಸ್ಪಿನ್ನರ್ ಎನಿಸಿಕೊಂಡರು.
ಒಟ್ಟಾರೆ ಐಪಿಎಲ್‌ನಲ್ಲಿ 150 ವಿಕೆಟ್‌ಗಳ ಗಡಿ ದಾಟಿದ ಎಂಟನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾದರು.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.
ಮೊದಲು ರಜತ್ ಪಾಟಿದಾರ್ ಅವರನ್ನು ಔಟ್ ಮಾಡಿದ ಅಶ್ವಿನ್ ನಂತರ ಸುಯಾಶ್ ಪ್ರಭು ದೇಸಾಯಿ ಮತ್ತು ಶಹಬಾಜ್ ಅಹ್ಮದ್ ವಿಕೆಟ್ ಪಡೆದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ.. ರಾಜಸ್ಥಾನ್ ರಾಯಲ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 29 ರನ್‌ಗಳಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ನಂತರ ಬೆಂಗಳೂರು 19.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟಾಯಿತು. ipl-2022-ashwin-becomes-2nd-spinner-take-150-wickets