IPL 2022 | ಇನ್ಮುಂದೆ ಸುಮ್ ಸುಮ್ನೆ ಐಪಿಎಲ್ ಬಿಡುವಂತಿಲ್ಲ
IPL-2022 ಆರಂಭಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟಿಗರಾದ ಜೇಸನ್ ರಾಯ್ ಮತ್ತು ಅಲೆಕ್ಸ್ ಹೇಲ್ಸ್ ಅನಿರೀಕ್ಷಿತವಾಗಿ ಐಪಿಎಲ್ ನಿಂದ ತಪ್ಪಿಕೊಂಡು ಆಯಾ ಫ್ರಾಂಚೈಸಿಗಳಿಗೆ ಶಾಕ್ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಬಯೋಬಬಲ್ ನಿಯಮದ ಕಾರಣದಿಂದಾಗಿ ಈ ಸೀಸನ್ ಗೆ ಅಲಭ್ಯರಾಗುವ ಬಗ್ಗೆ ಈ ಕ್ರಿಕೆಟಿಗರು ತಿಳಿಸಿದ್ದಾರೆ.
ಐಪಿಎಲ್-2022 ಮೆಗಾ ಹರಾಜಿನ ಭಾಗವಾಗಿ ಜೇಸನ್ ರಾಯ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿಸಿದರೆ, ಅಲೆಕ್ಸ್ ಹೇಲ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿತ್ತು.
ಯಾವುದೇ ಕಾರಣವಿಲ್ಲದೆ ಐಪಿಎಲ್‌ನಿಂದ ತೊರೆದ ಈ ಇಬ್ಬರು ಕ್ರಿಕೆಟಿಗರ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳುತ್ತಿದೆ ಎಂದು ವರದಿಯಾಗಿದೆ.
ಯಾವುದೇ ಕಾರಣಕ್ಕೂ ಆಟಗಾರರು ಇನ್ನು ಮುಂದೆ ಐಪಿಎಲ್‌ನಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಬಿಸಿಸಿಐ ಹೊಸ ನೀತಿಯನ್ನು ತರಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆಯಂತೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಸೂಕ್ತ ಕಾರಣವಿಲ್ಲದೆ ಐಪಿಎಲ್‌ನಿಂದ ತಪ್ಪಿಸಿಕೊಳ್ಳುವ ಆಟಗಾರರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ipl-2022-bcci-mulling-take-strict-action