IPL 2022 | ಸೋತು ಸುಣ್ಣವಾಗಿರುವ ಮುಂಬೈಗೆ ಪ್ಲೇ ಆಫ್ ಚಾನ್ಸ್ ಇದ್ಯಾ..?
ಐಪಿಎಲ್ 2022 ಮುಂಬೈ ಇಂಡಿಯನ್ಸ್ ಪಾಲಿಗೆ ಕೆಟ್ಟ ಕನಸಾಗಿದೆ.
ಟೀಂ ಇಂಡಿಯಾದ ನಾಯಕರಾಗಿ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ಯಶಸ್ಸಿನ ಉತ್ತುಂಗದಲ್ಲಿದ್ದರು.
ಆದ್ರೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಈ ಬಾರಿ ಮಕಾಡೆ ಮಲಗಿದ್ದಾರೆ.
ಆಡಿದ ಏಳು ಪಂದ್ಯಗಳಲ್ಲಿ ಏಳೂ ಪಂದ್ಯಗಳನ್ನು ಸೋತಿರುವ ರೋಹಿತ್ ಐಪಿಎಲ್ ನಲ್ಲಿ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇನ್ನು ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲು ಕಾಣುವುದರೊಂದಿಗೆ ಪ್ಲೇ ಆಫ್ ತಲುಪುವ ಮುಂಬೈ ಕನಸು ನುಚ್ಚು ನೂರಾಗಿದೆ.
ಯಾಕಂದರೇ ಈಗ ಆಡಿರುವ ಮ್ಯಾಚ್ ಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ತಂಡದ ರನ್ ರೇಟ್ 0.892 ರಷ್ಟಿದೆ. ಇನ್ನುಳಿದಿರೋದು ಏಳು ಪಂದ್ಯಗಳು ಮಾತ್ರ.
ಪ್ಲೇ ಆಪ್ ತಲುಪಬೇಕಾದ್ರೆ ಇನ್ನುಳಿದ ಪಂದ್ಯಗಳಲ್ಲಿ ಮುಂಬೈ ಗೆದ್ದರೂ 14 ಅಂಕಗಳನ್ನು ಪಡೆದುಕೊಳ್ಳಲಿದೆ.
ಜೊತೆಗೆ ರನ್ ರೇಟ್ ಕೂಡ ಹೆಚ್ಚಾಗಿರಬೇಕಾಗುತ್ತದೆ. ಅದೇ ಇನ್ನುಳಿದ ತಂಡಗಳ ಜಯ ಅಪಜಯಗಳ ಲೆಕ್ಕಾಚಾರ ಕೂಡ ನಡೆಯಬೇಕಾಗುತ್ತದೆ. ipl-2022-can-mumbai-indians-team-qualify-playoffs