IPL 2022 | ಐಪಿಎಲ್ ನಲ್ಲಿ ಗಲ್ಲಿ ಪಂಚಾಯ್ತಿ.. ಕುಲ್ಚಾ ಜಂಗೀಕುಸ್ತಿ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಮಬಲದ ಕಾದಾಟ ನಡೆಸಿದವು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.
ಈ ಸವಾಲಿನ ಮೊತ್ತವನ್ನ ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಕೊನೆ ಹಂತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು.
ಆದ್ರೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್‌ಗಳಿಸುವ ಮೂಲಕ 15 ರನ್‌ಗಳ ಸೋಲೊಪ್ಪಿಕೊಂಡಿತು.
ಆದ್ರೆ ಕೊನೆಯ ಓವರ್ ನಲ್ಲಿ ಡೆಲ್ಲಿಗೆ ಗೆಲ್ಲಲು 36 ರನ್ ಗಳ ಅವಶ್ಯಕತೆ ಇತ್ತು.
ಒಬೆಡ್ ಮೆಕಾಯ್ ಮಾಡಿದ 20ನೇ ಓವರ್ ನಲ್ಲಿ ಮೊದಲ ಮೂರು ಎಸೆತಗಳಿಗೆ ಪೋವಲ್ ಮೂರು ಸಿಕ್ಸರ್ ಸಿಡಿಸಿದರು.
ಈ ಹಂತದಲ್ಲಿ ನೋ ಬಾಲ್ ಕುರಿತಂತೆ ಕೆಲ ಸಮಯ ಗೊಂದಲ ಉಂಟಾಯ್ತು.
ಕ್ರೀಸ್ ನಲ್ಲಿದ್ದ ಬ್ಯಾಟರ್ ಗಳನ್ನು ಪಂತ್ ವಾಪಸ್ ಬರುವಂತೆ ಹೇಳಿದ್ರು.
ಈ ಸಮಯದಲ್ಲಿ ಕ್ರೀಸ್ ನಲ್ಲಿದ್ದ ಕುಲ್ ದೀಪ್ ಯಾದವ್ ಮತ್ತು ಪೋವೆಲ್ ಡಗೌಟ್ ನತ್ತ ಹೆಜ್ಜೆ ಹಾಕಿದ್ರು.
ಇದನ್ನ ಗಮನಿಸಿದ ಯುಜಿ ಚಹಲ್, ಕ್ರೀಸ್ ಮೈದಾನ ಬಿಡಲು ಸಿದ್ಧರಿದ್ದ ಕುಲ್ ದೀಪ್ ಅವರನ್ನ ತಡೆದರು.
ಕ್ಯಾಪ್ಟನ್ ಕರೆದ್ರೆ ಹೋಗ್ಬಿಡೋದಾ..? ಕ್ರೀಸ್ ಗೆ ಹೋಗು ಎನ್ನುತ್ತಾ ಕುಲ್ ದೀಪ್ ಅವರನ್ನ ಚಹಲ್ ತಳ್ಳಿಸಿದರು.
ಈ ದೃಶ್ಯಾವಳಿಗಳ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತ ರಿಷಬ್ ಪಂತ್ ನಡೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪಂತ್ ಆ ರೀತಿ ವರ್ತಿಸುವುದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ipl-2022-chahal-and-kuldeep-yadav-banter