IPL 2022 | ಚಹಲ್ ಕೊಟ್ಟ ಪೋಸ್ ಹಿಂದಿದೆ ರಿವೇಂಜ್ ಕಥೆ
ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಯಜುವೇಂದ್ರ ಚಹಾಲ್ ಮೊದಲ ಹ್ಯಾಟ್ರಿಕ್ ಸಾಧಿಸಿದ್ದು ತಿಳಿದಿರುವ ವಿಚಾರ.
ಕೆಕೆಆರ್ ಮ್ಯಾಚ್ ನಲ್ಲಿ ಚಹಲ್ ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಸಾಧಿಸಿದ ಚಹಲ್ ಅಪರೂಪದ ಸಾಧನೆ ಮಾಡಿದ್ದಾರೆ.
ಈ ನಡುವೆ ಹ್ಯಾಟ್ರಿಕ್ ಸಾಧಿಸಿದ ಖುಷಿಯಲ್ಲಿ ಕೊಟ್ಟ ಪೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ತಮ್ಮ ಪೋಸ್ ಹಿಂದೆ ಇರುವ ವಿಷಯದ ಬಗ್ಗೆ ಮ್ಯಾಚ್ ನಂತರ ಮಾತನಾಡಿದ ಚಹಲ್, 2019 ವರ್ಲ್ಡ್ ಕಮ್ ಟೈಮ್ ನಲ್ಲಿ ಮಿಮ್ ಆಗಿ ಹುಟ್ಟಿಕೊಂಡ ಪೋಸ್ ಅನ್ನು ನಾನು ರಿಪೀಟ್ ಮಾಡಿದ್ದೇನೆ ಎಂದಿದ್ದಾರೆ.
ಆ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಆಡುವ 11ರಲ್ಲಿ ಚಹಲ್ ಗೆ ಅವಕಾಶ ಸಿಗಲಿಲ್ಲ. ಇದರಿಂದ ಡ್ರಿಂಕ್ಸ್ ಬಾಯ್ ಆಗಿ ಚಹಲ್ ಪ್ಲೇಯರ್ ಗಳಿಗೆ ಡ್ರಿಂಕ್ಸ್ ತಂದುಕೊಡುತ್ತಿದ್ರು.
ಈ ಹಿನ್ನೆಲೆಯಲ್ಲ ಬೌಂಡರಿ ಲೈನ್ ನಲ್ಲಿ ಎರಡು ಕಾಲುಗಳನ್ನು ಚಾಚಿ ಚಹಲ್ ಕೂತಿದ್ದರು.
ಆ ಫೋಟೋ ಆಗ ಸಾಕಷ್ಟು ಟ್ರೋಲ್ ಗೆ ಗುರಿಯಾಗಿತ್ತು. ಇದೀಗ ಅದೇ ಪೋಸ್ ಕೊಟ್ಟು ಟ್ರೋಲ್ ಮಾಡಿದವರಿಗೆ ಚಹಲ್ ತಿರುಗೇಟು ನೀಡಿದ್ದಾರೆ. ipl-2022-chahal-reveal-reason-recreate-2019-world-cup-meme