IPL | ಐಪಿಎಲ್ ನ ಹೊಸ ರೂಲ್ಸ್ ಏನು… ಓದಿ ಕ್ರೀಡಾ ಜಗತ್ತಿನ ಪ್ರಮುಖ ಸುದ್ದಿ
01 . ಎರಡು ಹೊಸ ತಂಡಗಳ ಆಗಮನದಿಂದಾಗಿ ಈ ಬಾರಿಯ ಐಪಿಎಲ್ ಈ ಮೊದಲಿಗಿಂತಲೂ ರಸವತ್ತಾಗಿರಲಿದೆ. ಜೊತೆಗೆ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಬಾರಿ ಐಪಿಎಲ್ ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಇಲ್ಲಿಯವರೆಗೆ ಪ್ರತಿ ತಂಡವು ಲೀಸ್ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತಿದ್ದವು. ಈಗಲೂ ಪ್ರತಿ ತಂಡವು ಗರಿಷ್ಠ 14 ಪಂದ್ಯಗಳನ್ನು ಆಡುತ್ತಿದ್ದು, ಫಾರ್ಮೆಟ್ ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. . ಐಪಿಎಲ್ ಮಾರ್ಚ್ 26 ರಿಂದ ಮೇ 29 ರವರೆಗೆ ನಡೆಯಲಿದೆ.
Rohit sharma | ರೋಹಿತ್ ನಡೆದಿದ್ದೇ ದಾರಿ.. ಮಾಡಿದ್ದೇ ದಾಖಲೆ..!
02.ಭಾರತದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಚಿನ್ನದೊಂದಿಗೆ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಸಿಂಗಾಪುರ್ ಅಂತರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಮೀರಾಬಾಯಿ ಚಾನು (55 ಕೆಜಿ) ಸ್ವರ್ಣ ಪದಕ ಗೆದ್ದಿದ್ದಾರೆ. ಮೀರಾಬಾಯಿ ಒಟ್ಟು 191 (ಸ್ನ್ಯಾಚ್ನಲ್ಲಿ 86+, ಕ್ಲೀನ್ ಮತ್ತು ಜರ್ಕ್ನಲ್ಲಿ 105) ಕೆಜಿ ತೂಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
IPL 2022 | ಈ ಬಾರಿಯ ಐಪಿಎಲ್ ನ ಕಂಪ್ಲೀಟ್ ಡಿಟೈಲ್ಸ್..!
03.ಟೀಂ ಇಂಡಿಯಾ ಯುವ ಕ್ರಿಕೆಟಿಗ ರುತುರಾಜ್ ಗಾಯಕ್ವಾಡ್ ಅವರನ್ನು ಮತ್ತೊಮ್ಮೆ ದುರದೃಷ್ಟ ಕಾಡಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ರುತುರಾಜ್ ಗಾಯದಿಂದಾಗಿ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಮೊದಲ ಟಿ20ಯಲ್ಲಿ ಬೆಂಚ್ಗೆ ಸೀಮಿತವಾಗಿದ್ದ ರುತುರಾಜ್ ಎರಡನೇ ಟಿ20ಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಬ್ಯಾಟಿಂಗ್ ಅಭ್ಯಾಸದ ವೇಳೆ ರುತುರಾಜ್ ಗಾಯಗೊಂಡಿದ್ದು, ಇನ್ನುಳಿದ ಪಂದ್ಯಗಳಿಗೆ ದೂರವಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Ruturaj Gaikwad | ನತದೃಷ್ಟ ರುತುರಾಜ್ ಗಾಯಕ್ವಾಡ್..!
04.ವಿರಾಟ್ ಕೊಹ್ಲಿ ಜಾಗಕ್ಕೆ ಯುವ ಆಟಗಾರ ಶ್ರೇಯಸ್ ಅಯ್ಯರ್ ಸೂಕ್ತ ಆಟಗಾರ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಕೇವಲ 28 ಎಸೆತಗಳಲ್ಲಿ 57 ರನ್ ಗಳಿಸಿದರು. ಕೊಹ್ಲಿ ಬದಲಿಗೆ ಬ್ಯಾಟಿಂಗ್ ಗೆ ಬಂದ ಅಯ್ಯರ್ ಬೌಂಡರಿ ಸಿಕ್ಸರ್ ಗಳು ಮೂಲಕ ರನ್ ಸುನಾಮಿ ಎಬ್ಬಿಸಿದ್ರು. ಹೀಗಾಗಿ ಶ್ರೇಯಸ್ ಅಯ್ಯರ್ ಅವರನ್ನ ಕೊಹ್ಲಿ ಬ್ಯಾಕಪ್ ಆಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನೋಡಬೇಕು ಅಂತಾ ಸಂಜಯ್ ಬಂಗಾರ್ ಹೇಳಿದ್ದಾರೆ.
Shreyas iyer | ಆತ ಅದ್ಭುತ ಕ್ರಿಕೆಟರ್.. ಬ್ಯಾಟ್ ನಿಂದಲೇ ಉತ್ತರ ಕೊಟ್ಟ
05.ಶ್ರೀಲಂಕಾ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್ ಅಬ್ಬರದ ಪ್ರದರ್ಶನ ನೀಡಿದರು. ಈಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಇಶಾನ್ ಕಿಶನ್ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಟಿ20ಯಲ್ಲಿ ಕಿಶನ್ ಉತ್ತಮ ದಾಖಲೆ ಹೊಂದಿದ್ದರೂ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸ್ಥಿರವಾಗಿ ಆಡುವ ಅಗತ್ಯವಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
IND vs SL : ಇಶಾನ್ ಕಿಶಾನ್ ಇನ್ನೂ ಕಲಿಯೋದಿದೆ
ipl-2022 Cricket Virat kohli ishan kishan