ಮೈದಾನಕ್ಕೆ ಇಳಿಯದೇ 100 ಕೋಟಿ ಬಾಚಿದ CSK
ಐಪಿಎಲ್ 2022 ಸೀಸನ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಪರೂಪದ ಸಾಧನೆ ಮಾಡಿದೆ.
ಪ್ರಾಯೋಜಕರ ಮೂಲಕ ತಂಡಕ್ಕೆ ಬಂದ ಆದಾಯ 100 ಕೋಟಿ ಗಡಿ ತಲುಪಿದೆ.
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಮಾತ್ರ ಈ ಸಾಧನೆ ಮಾಡಿತ್ತು.
ಇತ್ತೀಚೆಗೆ SNJ ಗ್ರೂಪ್‌ನೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ CSK 100 ಕೋಟಿ ಕ್ಲಬ್‌ಗೆ ಸೇರಿದ ಎರಡನೇ IPL ತಂಡವಾಗಿದೆ.
CSK ಈಗಾಗಲೇ ಇಂಡಿಯಾ ಸಿಮೆಂಟ್ಸ್, ಅಮುಲ್, ಅಮೆಜಾನ್ ಪೇ, ಟಿವಿಎಸ್ ಯುರೋ ಗ್ರಿಪ್, ಗಲ್ಫ್ ಇಂಡಿಯಾ, ರಿಲಯನ್ಸ್ ಜಿಯೋ, ಡ್ರೀಮ್ 11, ಬ್ರಿಟಿಷ್ ಅಂಪೈರ್‌ನಂತಹ ದೈತ್ಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಇವುಗಳಲ್ಲಿ, TVS ಯುರೋ ಗ್ರಿಪ್ CSK ಅಧಿಕೃತ ಜರ್ಸಿ ಪಾಲುದಾರರಾಗಿದ್ದರೆ, ಇಂಡಿಯಾ ಸಿಮೆಂಟ್ಸ್ ಜರ್ಸಿ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತದೆ.
ಮಾರ್ಚ್ 26 ರಿಂದ ಐಪಿಎಲ್ 2022 ಮೆಗಾ ಸೀಸನ್ ಪ್ರಾರಂಭವಾಗಲಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಕಳೆದ ವರ್ಷದ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ipl-2022-csk-cross-100-crore-revenue saaksha tv