CSK vs GT Match | ಗುಜರಾತ್ ಟೈಟಾನ್ಸ್ ತಂಡದ ಪ್ಲೇಯಿಂಗ್ ಇಲೆವೆನ್
1 min read
IPL 2022 csk-vs-gt-match-Gujarat Titans Probable XI saaksha tv
CSK vs GT Match | ಗುಜರಾತ್ ಟೈಟಾನ್ಸ್ ತಂಡದ ಪ್ಲೇಯಿಂಗ್ ಇಲೆವೆನ್
15ನೇ ಆವೃತ್ತಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದೆ.
ಐಪಿಎಲ್ ಗೆ ಹೊಸ ತಂಡವಾಗಿ ಪಾದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಬಲಿಷ್ಠ ತಂಡಗಳಿಗೆ ನೀರು ಕುಡಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಅದರಲ್ಲೂ ಮುಖ್ಯವಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯತ್ವಕ ಎಲ್ಲರ ಗಮನ ಸೆಳೆದಿದೆ.
ಈಗಾಗಲೇ ಈ ಆವೃತ್ತಿಯಲ್ಲಿ ಪ್ಲೇ ಆಫ್ಸ್ ಗೆ ಸೇರಿರುವ ಗುಜರಾತ್ ತಂಡ ಈ ಸೀಸನ್ ನಲ್ಲಿ 15 ನೇ ಸೀಸನ್ ನಲ್ಲಿ ಈವರೆಗು 12 ಪಂದ್ಯಗಳನ್ನಾಡಿದೆ.
ಈ ಪೈಕಿ 9 ಪಂದ್ಯಗಳಲ್ಲಿ ಗೆದ್ದು 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಖಾಮುಖಿಯಾಗಿತ್ತು.
ಇದರಲ್ಲಿ ಹಾರ್ದಿಕ್ ಪಡೆ 62 ರನ್ ಗಳಿಂದ ಗೆಲುವು ಸಾಧಿಸಿದ್ದು, ಶುಭ್ ಮನ್ ಗಿಲ್ 62 ರನ್, ರಶೀದ್ 4 ವಿಕೆಟ್ ಪಡೆದು ಮಿಂಚಿದ್ದರು.
ಕಳೆದ ಪಂದ್ಯದಲ್ಲಿ ಗೆದ್ದಿರುವ ಜೋಶ್ ನಲ್ಲಿರುವ ಗುಜರಾತ್ ಟೈಟಾನ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಹೌದು..! ಇಂಡಿಯನ್ ಪ್ರಿಮಿಯರ್ ಲೀಗ್ ನ 62 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇಂದಿನ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿದ್ದು, ಈ ಸೀಸನ್ ನಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಸೆಣಸಾಟದಲ್ಲಿ ಗುಜರಾತ್ ಟೈಟಾನ್ಸ್ ತಂಡ ಮೂರು ವಿಕೆಟ್ ಗಳಿಂದ ಜಯ ಸಾಧಿಸಿತ್ತು.
ಗುಜರಾತ್ ಟೈಟಾನ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆರಂಭದಲ್ಲಿದ್ದ ಆರಂಭಿಕರ ಸಮಸ್ಯೆ ವೃದ್ಧಿಮಾನ್ ಸಹಾ ಮೂಲಕ ಪರಿಹಾರಗೊಂಡಿದೆ. ಮತ್ತೊಬ್ಬ ಆರಂಭಿಕ ಶುಭ್ ಮನ್ ಗಿಲ್ ಒಳ್ಳೆ ಫಾರ್ಮ್ ನಲ್ಲಿದ್ದಾರೆ.
ಮಿಡಲ್ ಆರ್ಡರ್ ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಡೆವಿಲ್ ಮಿಲ್ಲರ್, ರಾಹುಲ್ ತೆವಾಟಿಯಾ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ರಶೀದ್ ಖಾನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ.
ಬೌಲಿಂಗ್ ವಿಚಾರಕ್ಕೆ ಬಂದರೇ ಮೊಹ್ಮದ್ ಶಮಿ , ಅಲ್ಜರಿ ಜೋಸೆಫ್, ಯಶ್ ದಯಾಲ್ ಪವರ್ ಪ್ಲೇ ಮತ್ತು ದೆತ್ ಓವರ್ ಗಳಲ್ಲಿ ವಿಕೆಟ್ ಬೇಟೆ ಯಾಡುತ್ತಿದ್ದಾರೆ. ಸಾಯಿ ಕಿಶೋರ್ ಮತ್ತು ರಶೀದ್ ಖಾನ್ ಮಿಡಲ್ ಓವರ್ ಗಳಲ್ಲಿ ರನ್ ಗಳಿಗೆ ಕಡಿವಾಣ ಹಾಕುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಪ್ಲೇಯಿಂಗ್ ಇಲೆವೆನ್
ವೃದ್ಧಿಮಾನ್ ಸಹಾ
ಶುಭಮನ್ ಗಿಲ್
ಮ್ಯಾಥ್ಯೂ ವೇಡ್
ಹಾರ್ದಿಕ್ ಪಾಂಡ್ಯ (ಸಿ)
ಡೇವಿಡ್ ಮಿಲ್ಲರ್
ರಾಹುಲ್ ತೆವಾಟಿಯಾ
ರಶೀದ್ ಖಾನ್
ರವಿಶ್ರೀನಿವಾಸನ್ ಸಾಯಿ ಕಿಶೋರ್
ಅಲ್ಜಾರಿ ಜೋಸೆಫ್
ಯಶ್ ದಯಾಳ್
ಮೊಹಮ್ಮದ್ ಶಮಿ
IPL 2022 csk-vs-gt-match-Gujarat Titans Probable XI