IPL 2022 : CSK vs RCB ಎಲ್ ಕ್ಲಾಸಿಕೋ ಪಂದ್ಯದಲ್ಲಿ ಗೆಲುವು ಯಾರ ಕಡೆಗೆ ?
15ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ.
ಪುಣೆಯ ಎಮ್ ಸಿಎ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಈಗಾಗಲೇ ಹ್ಯಾಟ್ರಿಲ್ ಸೋಲು ಅನುಭವಿಸಿರುವ ಆರ್ ಸಿಬಿ ಸೋಲಿನಿಂದ ಹೊರಬರಲೇಬೇಕಿದೆ. ಈ ಪಂದ್ಯವನ್ನು ಗೆದ್ರೆ ಫ್ಲೇ ಆಫ್ ಹಾದಿ ಸುಗಮವಾಗಲಿದೆ.
ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಬಲ ತುಂಬಿದ್ದಾರೆ. ಈ ಬಾರಿ ನಾಯಕನಾಗಿ ಮೊದಲ ಪಂದ್ಯದಲ್ಲೇ ಗೆಲುವನ್ನು ಸಾಧಿಸಿದ್ದಾರೆ. ಹೀಗಾಗಿ ಸಾಲು ಸಾಲಾಗಿ ಸೋತ ಸಿಎಸ್ ಕೆ ತಂಡವನ್ನು ಸಾಲು ಸಾಲು ಪಂದ್ಯಗಳಲ್ಲಿ ಜಯ ದಾಖಲಿಸುವಂತೆ ಮಾಡುವ ಹೊಣೆ ಧೋನಿ ಮೇಲಿದೆ.
ಇನ್ನು ಉಭಯ ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆಗಳಿಲ್ಲ. ಆರ್ ಸಿಬಿ ತಂಡದಲ್ಲಂತೂ ಪ್ರಯೋಗ ಮಾಡುವ ಅಗತ್ಯವೇ ಇಲ್ಲ. ಸಂಘಟಿತ ಆಟವನ್ನು ಆಡುವತ್ತ ಚಿತ್ತವನ್ನಿಡಬೇಕಿದೆ. ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದ್ರೂ ನಾಯಕ ಫಾಫ್ ಡು ಪ್ಲೇಸಸ್, ಗ್ಲೇನ್ ಮ್ಯಾಕ್ಸ್, ದಿನೇಶ್ ಕಾರ್ತಿಕ್ ಅವರ ಅಬ್ಬರ ಕಮ್ಮಿಯಾಗಿದೆ. ಬೌಲಿಂಗ್ ವಿಭಾಗದಲ್ಲೂ ಸುಧಾರಣೆಯಾಗಬೇಕಿದೆ. ಒಟ್ಟಿನಲ್ಲಿ ಆರ್ ಸಿಬಿ ಈ ಹಿಂದೆ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲುವಿನತ್ತ ಚಿತ್ತವನ್ನಿಡಬೇಕಿದೆ.
ಇನ್ನು ಸಿಎಸ್ ಕೆ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಫಾರ್ಮ್‍ಋ ಆರ್ ಸಿಬಿ ಬೌಲರ್ ಗಳಿಗೆ ಕಂಟಕವಾಗಬಹುದು. ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಸ್ಪೋಟಕ ಆಟವನ್ನಾಡಿದ್ರೆ ಆರ್ ಸಿಬಿಗೆ ಅಪಾಯ ತಪ್ಪಿದ್ದಲ್ಲ. ಮ್ಯಾಚ್ ಫಿನಿಶರ್ ಜವಾಬ್ದಾರಿ ನಾಯಕ ಧೋನಿ ಮೇಲಿದೆ. ಆದ್ರೂ ಸಿಎಸ್ ಕೆ ತಂಡದ ಬೌಲಿಂಗ್ ವಿಭಾಗ ಇನ್ನಷ್ಟು ಪರಿಣಾಮಕಾರಿಯಬೇಕಿದೆ.
ಇನ್ನು ಅಂಕಿ ಅಂಶಗಳ ಪ್ರಕಾರ ಆರ್ ಸಿಬಿ ವಿರುದ್ಧ ಸಿಎಸ್ ಕೆ ಮೇಲುಗೈ ಸಾಧಿಸಿದೆ. ಆಡಿರುವ 30 ಪಂದ್ಯಗಳಲ್ಲಿ ಸಿಎಸ್ ಕೆ 20 ಪಂದ್ಯಗಳನ್ನು ಗೆದ್ದುಕೊಂಡ್ರೆ, 9 ಪಂದ್ಯಗಳನ್ನು ಆರ್ ಸಿಬಿ ಗೆದ್ದಿದೆ. ಒಟ್ಟಾರೆ, ಮೇ 4ರಂದು ನಡೆಯಲಿರುವ ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳ ಹೋರಾಟ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.