IPL 2022 | ಮೊದಲ ಗೆಲುವಿಗಾಗಿ ಚೆನ್ನೈ- ಹೈದರಾಬಾದ್ ಸೆಣಸಾಟ
15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮೊದಲ ಗೆಲುವಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮಧ್ಯಾಹ್ನ ಗುದ್ದಾಡಲಿವೆ.
ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೂ ಗೆಲುವೇ ಮೂಲ ಮಂತ್ರವಾಗಿದೆ.
ಸ್ಟ್ರೆಂಥ್ ಅಂಡ್ ವೀಕ್ನೆಸ್
ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ಸನ್ ರೈಸರ್ಸ್ ತಂಡದಲ್ಲಿ ಸಾಂಘೀಕ ಆಟದ ಕೊರತೆ ಎದ್ದು ಕಾಣುತ್ತಿದೆ.
ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಂಡು ಬಂದ್ರೂ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಲು ವಿಫಲರಾಗುತ್ತಿದ್ದಾರೆ.
ಹಾಗೇ ಬ್ಯಾಟಿಂಗ್ ವಿಭಾಗದಲ್ಲೂ ಯುವ ಆಟಗಾರರು ಇದ್ರೂ ಕೂಡ ನಿರೀಕ್ಷಿತ ಆಟ ಹೊರಬರುತ್ತಿಲ್ಲ. ಮುಖ್ಯವಾಗಿ ಮ್ಯಾಚ್ ಫೀನಿಶರ್ ಕೊರತೆ ಎದ್ದು ಕಾಣುತ್ತಿದೆ.
ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ ಮೂರು ಪಂದ್ಯಗಳನ್ನು ಸೋತಿದೆ.
ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರ ಫಾರ್ಮ್ ತಂಡಕ್ಕೆ ದೊಡ್ಡ ಚಿಂತೆಯನ್ನುಂಟು ಮಾಡಿದೆ.
ಇನ್ನುಳಿದಂತೆ ರಾಬಿನ್ ಉತ್ತಪ್ಪ, ಅಂಬಟಿ ರಾಯುಡ್ ಹಾಗೂ ಧೋನಿ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ.
ಆದ್ರೂ ಬೌಲಿಂಗ್ ವಿಭಾಗದಲ್ಲಿ ಎಡವುತ್ತಿದೆ. ಆಲ್ ರೌಂಡರ್ ಗಳಾದ ಡ್ರೇನ್ ಬ್ರೇವೋ ಮತ್ತು ಮೋಯಿನ್ ಆಲಿ ಕೂಡ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ಆನ್ ಪೇಪರ್ ತಂಡಗಳನ್ನು ನೋಡಿದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಲಿಷ್ಠವಾಗಿ ಕಾಣುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ipl-2022-csk vs srh prediction today match