IPL 2022 | ಧೋನಿ ಅಬ್ಬರಕ್ಕೆ ಎಬಿಡಿ ದಾಖಲೆ ಉಡೀಸ್..!
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್, ಮಿಸ್ಟರ್ ಫಿನಿಶರ್ ಎಂಎಸ್ ಧೋನಿ ಐಪಿಎಲ್-2022 ರಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ನಲ್ಲಿ ಎದುರಾಳಿ ಬೌಲರ್ ಬೌಲಿಂಗ್ ನಲ್ಲಿ ಅತ್ಯಂತ ವೇಗವಾಗಿ ನೂರು ಗಳಿಸಿದ ಸಾಧನೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ಸುರೇಶ್ ರೈನಾ, ಎಬಿ ಡಿವಿಲಿಯರ್ಸ್ ಮತ್ತು ಕೀರನ್ ಪೊಲಾರ್ಡ್ ಇದ್ದರು.
ಇದೀಗ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಯದೇವ್ ಉನದ್ಕತ್ ಬೌಲಿಂಗ್ ನಲ್ಲಿ ಬೌಂಡರಿ, ಸಿಕ್ಸರ್ ಗಳನ್ನು ಸುರಿಸಿ ರೈನಾ, ಎಬಿಡಿ, ಪೋಲಾರ್ಡ್ ಅವರನ್ನ ಹಿಂದಿಕ್ಕಿದ್ದಾರೆ.
ಒಟ್ಟಾರೆ ಐಪಿಎಲ್ ನಲ್ಲಿ ಉನದ್ಕತ್ ಬೌಲಿಂಗ್ ನಲ್ಲಿ 42 ಎಸೆತಗಳನ್ನು ಎದುರಿಸಿದ ಧೋನಿ 100 ರನ್ ಪೂರೈಸಿದ್ದಾರೆ.
ಇದಕ್ಕೂ ಮುನ್ನ ಸುರೇಶ್ ರೈನಾ 47 ಎಸೆತಗಳಲ್ಲಿ ಸಂದೀಪ್ ಶರ್ಮಾ ಬೌಲಿಂಗ್ ನಲ್ಲಿ, ಎಬಿ ಡಿವಿಲಿಯರ್ಸ್ ಕೂಡ ಸಂದೀಪ್ ಶರ್ಮಾ ಬೌಲಿಂಗ್ ನಲ್ಲಿ 47 ಎಸೆತಗಳ್ಲಲ್ಲಿ ನೂರು ರನ್ ಗಳ ಗಡಿದಾಟಿದ್ದರು.
ಕಿರಾನ್ ಪೊಲಾರ್ಡ್ ಜಡೇಜಾ ಬೌಲಿಂಗ್ ನಲ್ಲಿ 47 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ಇದೀಗ ಎಂ.ಎಸ್.ಧೋನಿ ಜಯದೇವ ಉನಾದ್ಕಟ್ ಬೌಲಿಂಗ್ ನಲ್ಲಿ 42 ಎಸೆತಗಳ್ಲಲಿ ನೂರು ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಒಬ್ಬ ಆಟಗಾರರ ಬೌಲಿಂಗ್‌ನಲ್ಲಿ ವೇಗವಾಗಿ 100 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು:
ಎಂಎಸ್ ಧೋನಿ – 42 ಎಸೆತಗಳು – ಜಯದೇವ್ ಉನದ್ಕತ್ ಬೌಲಿಂಗ್
ಸುರೇಶ್ ರೈನಾ – 47 ಎಸೆತಗಳು – ಸಂದೀಪ್ ಶರ್ಮಾ ಬೌಲಿಂಗ್
ಎಬಿ ಡಿವಿಲಿಯರ್ಸ್ – 47 ಎಸೆತಗಳು – ಸಂದೀಪ್ ಶರ್ಮಾ ಬೌಲಿಂಗ್
ಕೀರನ್ ಪೊಲಾರ್ಡ್ – 47 ಆಫ್ – ರವೀಂದ್ರ ಜಡೇಜಾ ಬೌಲಿಂಗ್
ipl-2022-dhoni-rare-record-fastest-100-runs-particular-bowler