IPL 2022 : ಚೆನ್ನೈ ಸೋಲಿಗೆ ಕಾರಣ ಬಿಚ್ಚಿಟ್ಟ ಧೋನಿ
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ವೈಫಲ್ಯ ಕಂಡಿದೆ.
ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ರನ್ ಗಳಿಂದ ಸೋಲು ಕಂಡಿದೆ.
ಈ ಮ್ಯಾಚ್ ನಲ್ಲಿ ತಮ್ಮ ತಂಡದ ಸೋಲಿಗೆ ಕಾರಣಗಳನ್ನು ಎಂ.ಎಸ್.ಧೋನಿ ಬಹಿರಂಗಗಳೊಳಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ನಾವು ಬೆಂಗಳೂರು ತಂಡವನ್ನು 170 ರನ್ ಗಳಿಗೆ ಕಟ್ಟಿ ಹಾಕಿದ್ವಿ.
ಬ್ಯಾಟಿಂಗ್ ನಲ್ಲಿ ನಮ್ಮ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಆದರೆ ಮಿಡಲ್ ಆರ್ಡರ್ ನ ನಮ್ಮ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು.
ಚೇಸಿಂಗ್ ಮಾಡುವಾಗ ಬ್ಯಾಟಿಂಗ್ ವಿಷಯದಲ್ಲಿ ಹೇಗೆ ಆಡಬೇಕೆಂದು ಗೊತ್ತಿದೆ.
ಸಂದರ್ಭಗಳನ್ನು ಅವಲಂಬಿಸಿ, ನಮ್ಮ ಬ್ಯಾಟಿಂಗ್ ಪ್ರವೃತ್ತಿಯು ಕಾಲಕಾಲಕ್ಕೆ ಬದಲಾಗಬೇಕು.
ಅಂತಹ ಸಮಯದಲ್ಲಿ ಶಾಟ್‌ಗಳನ್ನು ಆಡುವುದಕ್ಕಿಂತ .. ಪರಿಸ್ಥಿತಿ ಏನು ಬೇಡುತ್ತದೆಯೋ ಅದನ್ನು ಪ್ಲೇ ಮಾಡಬೇಕಿತ್ತು.
ಪಿಚ್ ಬ್ಯಾಟಿಂಗ್ ಗೆ ಸಹಾಯ ಮಾಡುವಾಗ ಸತತವಾಗಿ ವಿಕೆಟ್ ಕಳೆದುಕೊಂಡೆವು.
ಇದೇ ಸೋಲಿಗೆ ಪ್ರಮುಖ ಕಾರಣ’ ಎಂದು ಧೋನಿ ಹೇಳಿದರು.
ಈ ಋತುವಿನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿರುವ ಸಿಎಸ್‌ಕೆ ಮೂರರಲ್ಲಿ ಗೆದ್ದು ಏಳರಲ್ಲಿ ಸೋತಿದೆ.
ipl-2022-dhoni-reasons-out-csks-loss