IPL 2022 | ನೋ ಬಾಲ್ ಗಾಗಿ SRH ಬೌಲರ್ಸ್ ಪೈಪೋಟಿ..!!
ಐಪಿಎಲ್ 2022 ರ ಅಂಗವಾಗಿ ನಡೆದ ಎಸ್ಆರ್ಹೆಚ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕುತೂಹಲಕಾರಿ ಘಟನೆ ನಡೆದಿದೆ.
ಪಂದ್ಯದ ಆರಂಭದಿಂದಲೂ SRH ಬೌಲರ್ಗಳು ನೋ ಬಾಲ್ ಗಳಿಗೆ ಪೈಪೋಟಿ ನಡೆಸಿದರು.
ಸಾಮಾನ್ಯವಾಗಿ ಬೌಲರ್ಗಳು ವಿಕೆಟ್ಗಳನ್ನು ಪಡೆಯುವುದನ್ನು ಆನಂದಿಸುತ್ತಾರೆ.
ಆದರೆ ಎಸ್ಆರ್ಹೆಚ್ ಬೌಲರ್ ಗಳು ವಿಶೇಷವಾಗಿರಲು ಬಯಸಿದ್ರು ಅನಿಸುತ್ತೆ.
ಭುವನೇಶ್ವರ್ನಿಂದ ಆರಂಭಿಸಿ ಉಮ್ರಾನ್ ಮಲಿಕ್ ಮತ್ತು ವಾಷಿಂಗ್ಟನ್ ಸುಂದರ್ ತಮ್ಮ ಮೊದಲ ಓವರ್ನಲ್ಲಿಯೇ ನೋಬಾಲ್ ಗಳನ್ನು ಎಸೆದರು.
ಇದರಲ್ಲಿ ಭುವನೇಶ್ವರ್ ನೋಬಲ್ ಜತೆ ವಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡರು. ಇದರಿಂದ ಜೀವದಾನ ಪಡೆದ ಬಟ್ಲರ್ ಬೌಂಡರಿ ಹಾಗೂ ಸಿಕ್ಸರ್ ಗಳ ಸುರಿಮಳೆಗೈದರು.
ಈ ಪಂದ್ಯದಲ್ಲಿ SRH ಬೌಲಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು.. ಎಲ್ಲಿಯಾದರೂ ಬೌಲರ್ಗಳು ವಿಕೆಟ್ಗಾಗಿ ಪೈಪೋಟಿ ನಡೆಸುತ್ತಾರೆ..
ಆದರೆ ಇಲ್ಲಿ ಎಸ್ ಆರ್ ಹೆಚ್ ಬೌಲರ್ ಗಳು ನೋಬಾಲ್ಗಾಗಿ ಹುಡುಕುತ್ತಿದ್ದಾರೆ.. ಎಷ್ಟಾದ್ರೂ SRH ಅಲ್ವಾ ಹಾಗೆ ಇರುತ್ತೆ ಅಂತಾ ಸೋಶಿಯಲ್ ಮಿಡಿಯಾದಲ್ಲಿ ಕಮೆಂಟ್ ಗಳನ್ನ ಮಾಡುತ್ತಿದ್ದಾರೆ. ipl-2022-fans-troll-srh-bowlers