IPL 2022 | ವಿರಾಟ್, ರೋಹಿತ್ ಬೆಂಬಲಕ್ಕೆ ನಿಂತ ಗವಾಸ್ಕರ್..
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿರೀಕ್ಷಿತ ಮಟ್ಟದಲ್ಲಿ ಮಿಂಚುತ್ತಿಲ್ಲ.
ಈ ಸೀಸನ್ ನಲ್ಲಿ ಏಳು ಪಂದ್ಯಗಳನ್ನಾಡಿರುವ ರೋಹಿತ್ 114 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 119 ರನ್ ಸಿಡಿಸಿದ್ದಾರೆ.
ಈ ಇಬ್ಬರ ಪ್ರದರ್ಶನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಮಾಡಲಾಗುತ್ತಿದೆ.
ಆದ್ರೆ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್, ವಿರಾಟ್, ರೋಹಿತ್ ಬೆಂಬಲಕ್ಕೆ ನಿಂತಿದ್ದಾರೆ.
ರೋಹಿತ್ ಶರ್ಮಾ ಇಲ್ಲಿಯವರೆಗೂ 7 ಪಂದ್ಯಗಳನ್ನಾಡಿದ್ದು, ಒಂದೇ ಒಂದು ದೊಡ್ಡ ಇನ್ನಿಂಗ್ಸ್ ಬಂದಿಲ್ಲ.
ಆದ್ರೆ ಆತ ಒಂದು ದೊಡ್ಡ ಇನ್ನಿಂಗ್ಸ್ ನೊಂದಿಗೆ ಫಾರ್ಮ್ಗೆ ಬರುತ್ತಾರೆ ಎಂದು ಭಾವಿಸುತ್ತೇನೆ.
ಆದ್ರೆ ಅವರು ವಿಫಲವಾಗುತ್ತಿರೋದು ತಂಡದ ಮೇಲೆ ಪರಿಣಾಮ ಬೀರುತ್ತಿದೆ.
ಆತ ಅದ್ಭುತವಾದ ಇನ್ನಿಂಗ್ಸ್ ಆಡಿದ್ರೆ ಮುಂಬೈ ಖಂಡಿತವಾಗಿಯೂ ಭಾರಿ ಸ್ಕೋರ್ ದಾಖಲಿಸುತ್ತದೆ. ರೋಹಿತ್ ಫಾರ್ಮ್ ಗೆ ಬರೋದು ಮುಂಬೈ ಗೆ ತುಂಬಾ ಅವಶ್ಯಕ ಎಂದಿದ್ದಾರೆ.
ಇನ್ನು ವಿರಾಟ್ ವಿಷಯಕ್ಕೆ ಬಂದ್ರೆ ವಿರಾಟ್ ಗೆ ಅದೃಷ್ಟ ಕೈ ಕೊಡುತ್ತಿದೆ. ಸಣ್ಣ ಸಣ್ಣ ತಪ್ಪುಗಳಿಂದ ಕೊಹ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ.
ಯಾವುದಾದ್ರೂ ಪಂದ್ಯದಲ್ಲಿ 30 ಕ್ಕೂ ಹೆಚ್ಚು ರನ್ ಗಳಿಸಿದಾಗ.. ಭಾರಿ ಇನ್ನಿಂಗ್ಸ್ ಕಟ್ಟುವತ್ತ ಪ್ರಯತ್ನಿಸಬೇಕು ಎಂದಿದ್ದಾರೆ. ipl-2022-gavaskar-backs-virat-kohli-and-rohit-sharma