IPL 2022 | ಟೈಟಾನ್ಸ್ VS ರಾಯಲ್ಸ್.. ಈ ಸಲ ಕಪ್ ಯಾರದ್ದು..?
ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯೋದು ಇಂಡಿಯನ್ ಪ್ರಿಮಿಯರ್ ಲೀಗ್ ನ ಫೈನಲ್ ಬ್ಯಾಟಲ್.
15 ನೇ ಆವೃತ್ತಿಯ ಐಪಿಎಲ್ ಟೈಟಲ್ ಗಾಗಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾಲ್ಸ್ ಕ್ಯಾಶ್ ರಿಚ್ ಲೀಗ್ ಗೆ ಹೊಸ ತಂಡವಾಗಿದೆ.
ಇತ್ತ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ಐಪಿಎಲ್ ಉದ್ಘಾಟನಾ ಆವೃತ್ತಿಯ ಚಾಂಪಿಯನ್.
ಅದಾದ ಬಳಿಕ ರಾಯಲ್ಸ್ ಇದೇ ಮೊದಲ ಬಾರಿಗೆ ಫೈನಲ್ ತಲುಪಿದೆ.
ಅಲ್ಲದೇ ಫೈನಲ್ ನಲ್ಲಿ ಕಪ್ ಗೆಲ್ಲುವ ಮೂಲಕ ತಮ್ಮ ಮೊದಲ ಕ್ಯಾಪ್ಟನ್ ದಿವಂಗತ ಶೇನ್ ವಾರ್ನ್ ಗೌರವ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಎರಡೂ ತಂಡಗಳ ಬಲಾಬಲ ಒಂದೇ ರೀತಿಯಾಗಿದೆ.
ಆತ್ಮವಿಶ್ವಾಸ ಎರಡೂ ತಂಡದ ದೊಡ್ಡ ಶಕ್ತಿ. ವೇಗದ ಬೌಲಿಂಗ್, ಸ್ಪಿನ್ ಬೌಲಿಂಗ್, ಆಲ್ರೌಂಡರ್ ಗಳು ಮತ್ತು ಬ್ಯಾಟರ್ಗೂ ತಂಡದಲ್ಲೂ ಸಮಾನಾಗಿ ಇದ್ದಾರೆ.
ರಾಯಲ್ಸ್ ತಂಡದ ಬ್ಯಾಟಿಂಗ್ಗೆ ಜೋಸ್ ಬಟ್ಲರ್ ಆಧಾರ. ಬಟ್ಲರ್ ಡಿಸೈಡ್ ಆದ್ರೆ ವಾರ್ ಒನ್ ಸೈಡ್ ಆಗುತ್ತೆ.

ಬಟ್ಲರ್ ಒಂಟಿ ಸಲಗದಂತೆ ಇಡೀ ಟೂರ್ನಿಯಲ್ಲಿ ರಾಯಲ್ಸ್ ಪರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್ ಸಿಕ್ಕ ಅವಕಾಶ ಬಾಚಿಕೊಂಡಿದ್ದಾರೆ. ದೇವದತ್ ಪಡಿಕಲ್ ಇವರಿಗೆ ಸಾಥ್ ನೀಡಬೇಕಿದೆ.
ನಾಯಕ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟ ಆಡಬೇಕಿದೆ. ಬ್ಯಾಟ್ಸ್ ಮನ್ ಆಗಿ ಅಶ್ವಿನ್ ನೀಡುತ್ತಿರುವ ಕೊಡುಗೆ ತಂಡಕ್ಕೆ ಅಮೂಲ್ಯ.
ಶಿಮ್ರನ್ ಹೆಟ್ಮಯರ್, ರಿಯಾನ್ ಪರಾಗ್ ಫಿನಿಷರ್ಗಳು. ಟ್ರೆಂಟ್ ಬೋಲ್ಟ್ ದುಬಾರಿ ಆದರೂ ತಂಡಕ್ಕೆ ಬೇಕೇ ಬೇಕು.
ಪ್ರಸಿಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಬೆಡ್ ಮೆಕಾಯ್ ಉತ್ತಮ ಲಯದಲ್ಲಿದ್ದಾರೆ. ಚಹಲ್ ಪರ್ಪಲ್ ಕ್ಯಾಪ್ ಒಡೆಯ. ಅಶ್ವಿನ್ ಬೌಲಿಂಗ್ನಲ್ಲಿ ರನ್ರೇಟ್ಗೆ ಕಡಿವಾಣ ಹಾಕಿದ್ದಾರೆ.
ಟೈಟಾನ್ಸ್ ತಂಡಕ್ಕೆ ಹೆಚ್ಚು ಚಿಂತೆ ಇಲ್ಲ. ವೃದ್ಧಿಮಾನ್ ಸಾಹಾ ಉತ್ತಮ ಲಯದಲ್ಲಿದ್ದಾರೆ. ಶುಭ್ಮನ್ ಗಿಲ್ ಕ್ರೀಸ್ನಲ್ಲಿ ನಿಂತ್ರೆ ರನ್ ಗ್ಯಾರೆಂಟಿ.
ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಬಲದ ಲಾಭ ಇದೆ. ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ ಮತ್ತು ಮ್ಯಾಥ್ಯೂ ವೇಡ್ ಕೂಡ ಬೌಲರ್ಗಳಿ ಚಳ್ಳೆ ಹಣ್ಣು ತಿನ್ನಿಸಬಹುದು. ರಶೀದ್ ಖಾನ್ ಸೂಪರ್ ಆಟ ಆಡುತ್ತಿದ್ದಾರೆ.
ಬೌಲಿಂಗ್ನಲ್ಲಿ ಮೊಹ್ಮದ್ ಶಮಿ, ಲೊಕೆ ಫರ್ಗ್ಯೂಸನ್ ಮತ್ತು ಯಶ್ ದಯಾಳ್ ವೇಗಿಗಳು. ರಶೀದ್ ಖಾನ್ ಮತ್ತು ಸಾಯಿ ಕಿಶೋರ್ ಸ್ಪಿನ್ ಮೂಲಕ ಬ್ಯಾಟ್ಸ್ ಮನ್ಗಳಿಗೆ ಕಡಿವಾಣ ಹಾಕುತ್ತಿದ್ದಾರೆ.
ಮೊಟೇರಾ ಮೈದಾನದಲ್ಲಿ ಟಾಸ್ ಗೆದ್ದ ಯಾವುದೇ ತಂಡ ಚೇಸಿಂಗ್ ಮಾಡುತ್ತದೆ. ಹೀಗಾಗಿ ಟಾಸ್ ಮೇಲೆ ಎಲ್ಲರ ಕಣ್ಣಿದೆ.








