IPL 2022 : ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಸ್ ಗಿಂತ ಹಾರ್ಧಿಕ್ ಬೆಸ್ಟ್
ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಸ್ ಗಿಂತ ಹಾರ್ಧಿಕ್ ಬೆಸ್ಟ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಹೊಗಳಿದ್ದಾರೆ.
ಭಾರತದ ಹೆಚ್ಚಿನ ಸ್ಟಾರ್ ಆಟಗಾರರಿಗಿಂತ ಹಾರ್ದಿಕ್ ಉತ್ತಮವಾಗಿ ಆಡುತ್ತಿದ್ದಾರೆ. ಪಾಂಡ್ಯ ಶೀಘ್ರದಲ್ಲೇ ಟೀಂ ಇಂಡಿಯಾವನ್ನ ಸೇರಿಕೊಳ್ಳಲಿದ್ದಾರೆ ಎಂದು ಹರ್ಭಜನ್ ಭವಿಷ್ಯ ನುಡಿದಿದ್ದಾರೆ.
ಹಾರ್ದಿಕ್ ಅದ್ಭುತ ತಂತ್ರಗಾರಿಕೆಯೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರು ಸತತವಾಗಿ ಮಿಂಚುತ್ತಿದ್ದಾರೆ.
ಇಲ್ಲಿಯವರೆಗೆ ಹಾರ್ದಿಕ್ ಈ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿಲ್ಲ. ಅವರು ಸಾಮಾನ್ಯವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಿದ್ದರು.
ಇನಿಂಗ್ಸ್‌ನ ಕೊನೆಯ ಮೂರ್ನಾಲ್ಕು ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಅವರಿಗೆ ಸಿಗುತ್ತಿತ್ತು. ಆದ್ರೆ ಮೂರನೇ ಕ್ರಮಾಂಕದಲ್ಲಿ ಬಂದು ತಮ್ಮ ಸಾಮರ್ಥ್ಯವೇನು ಎಂಬೋದನ್ನ ಹಾರ್ದಿಕ್ ಸಾಭೀತುಪಡಿಸಿದ್ದಾರೆ.
ಯಾವುದೇ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಹೆಚ್ಚು ಎಸೆತಗಳನ್ನು ಎದುರಿಸುತ್ತಾರೆ. ಹಾರ್ದಿಕ್ ಕೂಡ ಅಷ್ಟೇ.. ಒಮ್ಮೆ ಸೆಟ್ಟೇರಿದರೆ ಹೆಚ್ಚು ಅಪಾಯಕಾರಿಯಾಗಿ ಆಡುತ್ತಾರೆ.
ಭಾರತ ತಂಡದಲ್ಲಿ ಹಾರ್ದಿಕ್‌ಗೂ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಬೇಕು ಎಂದು ಭಜ್ಜಿ ಹೇಳಿದ್ದಾರೆ.
ipl-2022-Harbhajan Singh wants Hardik Pandya to bat up the order for Team India