IPL 2022 | ಪ್ರತಿ ತಂಡದಲ್ಲಿರುವ ಟಾಪ್ ಸ್ಕೋರರ್ ಲೀಸ್ಟ್ ಇಲ್ಲಿದೆ
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಅಂತಿಮ ಹಂತ ತಲುಪಿದೆ. ಈ ವರ್ಷದ ಋತುವಿನಲ್ಲಿ, ಎಂದಿನಂತೆ ಬ್ಯಾಟರ್ ಗಳು ಅಬ್ಬರಿಸಿ ಬೊಬ್ಬರಿದಿದ್ದಾರೆ.
ಅದರಲ್ಲೂ ಯುವ ಬ್ಯಾಟ್ಸ್ ಮನ್‌ಗಳು ಕೂಡ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸೀಸನ್ ನಲ್ಲಿ ಪ್ರತಿ ತಂಡದಿಂದ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿ ಇಲ್ಲಿದೆ.
ಶುಭಮನ್ ಗಿಲ್ (ಗುಜರಾತ್ ಟೈಟಾನ್ಸ್)
ಈ ಋತುವಿನಲ್ಲಿ ಶುಭ್‌ಮನ್ ಗಿಲ್ ಗುಜರಾತ್ ಟೈಟಾನ್ಸ್ ಪರವಾಗಿಲ್ಲ ಎಂಬಂತೆ ಪ್ರದರ್ಶನ ನೀಡಿದ್ದಾರೆ. ಟೈಟಾನ್ಸ್ ಪರ 14 ಪಂದ್ಯಗಳನ್ನು ಆಡಿರುವ ಗಿಲ್ 403 ರನ್ ಗಳಿಸಿ ತಂಡದ ಅಗ್ರ ಸ್ಕೋರರ್ ಆಗಿದ್ದಾರೆ.
ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್)
ಈ ಸೀಸನ್ ನಲ್ಲಿ ಜೋಸ್ ಬಟ್ಲರ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಋತುವಿನಲ್ಲಿ ಅವರು ಈಗಾಗಲೇ ಮೂರು ಶತಕಗಳನ್ನು ಗಳಿಸಿದ್ದಾರೆ. 14 ಪಂದ್ಯಗಳನ್ನಾಡಿರುವ ಬಟ್ಲರ್ ರಾಜಸ್ಥಾನ ತಂಡ ಮಾತ್ರವಲ್ಲದೇ ಟೂರ್ನಿಯಲ್ಲಿ 629 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದಾರೆ.
ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್)
ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಾಹುಲ್ ಐಪಿಎಲ್-2022ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ 14 ಪಂದ್ಯಗಳನ್ನಾಡಿರುವ ರಾಹುಲ್ 537 ರನ್ ಗಳಿಸಿ ಲಕ್ನೋ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ.
ಫಾಫ್ ಡು ಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಆರ್‌ಸಿಬಿಯ ನಾಯಕ ಫಾಫ್ ಡು ಪ್ಲೆಸಿಸ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಇದುವರೆಗೆ 14 ಪಂದ್ಯಗಳನ್ನು ಆಡಿರುವ ಡು ಪ್ಲೆಸಿಸ್ 443 ರನ್ ಗಳಿಸಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡದ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಡೇವಿಡ್ ವಾರ್ನರ್ (ದೆಹಲಿ ಕ್ಯಾಪಿಟಲ್ಸ್)
ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿರುವ ವಾರ್ನರ್ 432 ರನ್ ಗಳಿಸಿ ಡೆಲ್ಲಿ ತಂಡದ ಪರ ಗರಿಷ್ಠ ರನ್ ಗಳಿಸಿದ್ದಾರೆ.
ಶ್ರೇಯಸ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್)
ಕೆಕೆಆರ್‌ನ ನೂತನ ನಾಯಕರಾಗಿ ಅಧಿಕಾರ ವಹಿಸಿಕೊಂಡ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಋತುವಿನಲ್ಲಿ ಇದುವರೆಗೆ 14 ಪಂದ್ಯಗಳನ್ನು ಆಡಿರುವ ಅಯ್ಯರ್ 440 ರನ್ ಗಳಿಸಿದ್ದಾರೆ.
ಶಿಖರ್ ಧವನ್ (ಪಂಜಾಬ್ ಕಿಂಗ್ಸ್)
ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಧವನ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಋತುವಿನಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿರುವ ಧವನ್ 421 ರನ್ ಗಳಿಸಿ ಪಂಜಾಬ್ ಕಿಂಗ್ಸ್ ಪರ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದಾರೆ.
ರಾಹುಲ್ ತ್ರಿಪಾಠಿ (ಸನ್‌ರೈಸರ್ಸ್ ಹೈದರಾಬಾದ್)
ಸನ್ ರೈಸರ್ಸ್ ಹೈದರಾಬಾದ್ ಪರ ತ್ರಿಪಾಠಿ ಅದ್ಭುತವಾಗಿ ಆಡಿದ್ದಾರೆ. ಇದುವರೆಗೆ 14 ಪಂದ್ಯಗಳನ್ನು ಆಡಿರುವ ತ್ರಿಪಾಠಿ 413 ರನ್ ಗಳಿಸಿ ಎಸ್‌ಆರ್‌ಎಚ್ ಪರ ಅಗ್ರ ಸ್ಕೋರರ್ ಆಗಿದ್ದಾರೆ.
ರುತುರಾಜ್ ಗಾಯಕ್ವಾಡ್ (ಚೆನ್ನೈ ಸೂಪರ್ ಕಿಂಗ್ಸ್)
ಈ ವರ್ಷದ ಋತುವಿನ ಆರಂಭದಲ್ಲಿ ರುತುರಾಜ್ ಗಾಯಕ್ವಾಡ್ ನಿರಾಸೆ ಮೂಡಿಸಿದ್ದರು. ಆದ್ರೆ ದ್ವಿತೀಯಾರ್ಧದಲ್ಲಿ ಫಾರ್ಮ್ ಕಂಡುಕೊಂಡ ರುತುರಾಜ್, ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಈ ಸೀಸನ್ ನಲ್ಲಿ 14 ಪಂದ್ಯಗಳನ್ನಾಡಿದ ಗಾಯಕ್ವಾಡ್ 368 ರನ್ ಗಳಿಸಿ ಸಿಎಸ್ ಕೆ ಪರ ಅಗ್ರ ಸ್ಕೋರರ್ ಆಗಿದ್ದಾರೆ.
ತಿಲಕ್ ವರ್ಮಾ (ಮುಂಬೈ ಇಂಡಿಯನ್ಸ್)
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಿರಾಸೆ ಅನುಭವಿಸಿದ್ರೂ, ತಂಡದ ಬ್ಯಾಟ್ಸ್ ಮನ್ ತಿಲಕ್ ವರ್ಮಾ ಮಿಂಚು ಹರಿಸಿದ್ದಾರೆ. 14 ಪಂದ್ಯಗಳನ್ನಾಡಿದ ತಿಲಕ್ ವರ್ಮಾ 397 ರನ್ ಗಳಿಸಿ ಮುಂಬೈ ಪರ ಗರಿಷ್ಠ ಸ್ಕೋರರ್ ಆಗಿದ್ದಾರೆ.