IPL 2022 | ಗುಜರಾತ್ ಟೈಟಾನ್ಸ್ ಗೆ ಭಾರಿ ಶಾಕ್..
ಐಪಿಎಲ್ ನ ಹೊಸ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಗೆ ಆರಂಭದಲ್ಲಿಯೇ ಭಾರಿ ಹಿನ್ನಡೆಯಾಗಿದೆ.
ಬಯೋ ಬಬಲ್ ನಿಯಮಗಳಿಂದಾಗಿ ಇಂಗ್ಲೆಂಡ್ ಸ್ಟಾರ್ ಓಪನರ್ ಜೇಸನ್ ರಾಯ್ IPL-2022 ರಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ರಾಯ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತ್ತು.
ಇದೀಗ ಐಪಿಎಲ್ ನಿಂದ ಹಿಂದೆ ಸರಿಯಲು ರಾಯ್ ನಿರ್ಧರಿಸಿದ್ದು, ಗುಜರಾತ್ ಗೆ ಮಾಹಿತಿ ನೀಡಿದ್ದಾರೆ.
ಬಯೋಬಬಲ್ ನಿಂದಾಗಿಯೇ ಕಳೆದ ವರ್ಷ ಮೊದಲಾರ್ಧದ ಐಪಿಎಲ್ ನಿಂದ ದೂರ ಇದ್ದ ರಾಯ್, ಎರಡನೇ ಹಂತದ ಐಪಿಎಲ್ ನಲ್ಲಿ ಸನ್ ರೈಸರ್ಸ್ ಪರ ಕಣಕ್ಕಿಳಿಸಿದ್ದರು.
ಇದಕ್ಕೂ ಮುನ್ನ ರಾಯ್ ದೆಹಲಿಯನ್ನು ಪ್ರತಿನಿಧಿಸಿದ್ದರು.
ಜೇಸನ್ ರಾಯ್ ಕೊನೆಯದಾಗಿ ಪಾಕಿಸ್ತಾನ್ ಸೂಪರ್ ಲೀಗ್-2022 ರಲ್ಲಿ ಆಡಿದ್ದರು.
ಪಿಎಸ್ ಎಲ್ ನಲ್ಲಿ ರಾಯ್ ಕೇವಲ 6 ಪಂದ್ಯಗಳನ್ನು ಆಡಿ 303 ರನ್ ಗಳಿಸಿದ್ದರು.
ಅದೇ ರೀತಿ ಐಪಿಎಲ್ ಕೆರಿಯರ್ ನಲ್ಲಿ 13 ಪಂದ್ಯಗಳನ್ನಾಡಿರುವ ರಾಯ್ 329 ರನ್ ಗಳಿಸಿದ್ದಾರೆ.
ipl-2022-jason-roy-pulls-out-ipl-tournament