IPL 2022 | ಐಪಿಎಲ್ ಮೋಸ್ಟ್ ಲಕ್ಕಿ ಪ್ಲೇಯರ್ ಕರಣ್ ಶರ್ಮಾ..
ಐಪಿಎಲ್ನಲ್ಲಿ ಅದೃಷ್ಟಶಾಲಿ ಆಟಗಾರ ಯಾರು ಅಂದ್ರೆ ಕರ್ಣಶರ್ಮನ ಹೆಸರನ್ನು ಸಂಕೋಚವಿಲ್ಲದೆ ಹೇಳಬಹುದು. ಏಕೆಂದರೆ, ಆರ್ಸಿಬಿ ಹೊರತುಪಡಿಸಿ, ಅವರು ಕಾಲಿಟ್ಟ ಪ್ರತಿ ಐಪಿಎಲ್ ತಂಡವೂ ಪ್ರಶಸ್ತಿ ಗೆದ್ದಿದೆ.
ಹೌದು..! 2016ರ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರವಾಗಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ಕರ್ಣ್ ಶರ್ಮಾ, ಮುಂದಿನ ವರ್ಷ ಮುಂಬೈ ಇಂಡಿಯನ್ಸ್ಗೆ ತೆರಳಿದರು, ಅಲ್ಲಿಯೂ ಪ್ರಶಸ್ತಿಯನ್ನು ಗೆದ್ದರು.
ನಂತರ 2018 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಕರ್ಣ್ ಶರ್ಮಾ ಸತತ ಮೂರನೇ ವರ್ಷ IPL ಪ್ರಶಸ್ತಿಯನ್ನು ಗೆದ್ದರು.
ಸತತ ಮೂರು ಋತುಗಳಲ್ಲಿ ಮೂರು ವಿಭಿನ್ನ ತಂಡಗಳಿಗಾಗಿ IPL ಪ್ರಶಸ್ತಿಯನ್ನು ಗೆದ್ದ ಏಕೈಕ ಆಟಗಾರ.
2019 ಮತ್ತು 2020 ರಲ್ಲಿ ಕರ್ಣ್ ಶರ್ಮಾ ಲಕ್ ಗೆ ಬ್ರೇಕ್ ಇದ್ದಿತ್ತು. ಇದಾದ ಬಳಿಕ ಅವರ ಗೆಲುವಿನ ಓಟವು 2021 ರ ಋತುವಿನಲ್ಲಿ ಮತ್ತೆ ಪ್ರಾರಂಭವಾಯಿತು. ಕರ್ಣ್ ಶರ್ಮಾ ದುಬೈನಲ್ಲಿ ಕಳೆದ ವರ್ಷ ಐಪಿಎಲ್ನಲ್ಲಿ ಸಿಎಸ್ಕೆ ಪ್ರಶಸ್ತಿ ಗೆದ್ದ ವಿಜೇತ ತಂಡದ ಸದಸ್ಯರಾಗಿದ್ದಾರೆ.
ಉತ್ತರ ಪ್ರದೇಶದ 34 ವರ್ಷದ ಕರ್ಣ್ ಶರ್ಮಾ ಅವರು ಸ್ಪಿನ್ ಆಲ್ ರೌಂಡರ್ ಆಗಿ ಐಪಿಎಲ್ ಪ್ರವೇಶಿಸಿದ್ರು. ಅವರು 2009 ರ ಋತುವಿನಲ್ಲಿ RCB ಗೆ ಆಯ್ಕೆಯಾದರು.
ನಂತರ ಅವರು ಸನ್ರೈಸರ್ಸ್ ಹೈದರಾಬಾದ್ (2013-16), ಮುಂಬೈ ಇಂಡಿಯನ್ಸ್ (2017), ಚೆನ್ನೈ ಸೂಪರ್ ಕಿಂಗ್ಸ್ (2018-2021) ನಂತಹ ಹಲವಾರು ತಂಡಗಳಿಗಾಗಿ ಆಡಿದ್ದಾರೆ.
ಕರ್ಣ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 68 ಪಂದ್ಯಗಳಲ್ಲಿ 31 ವಿಕೆಟ್ ಪಡೆದಿದ್ದಾರೆ ಮತ್ತು 15.1 ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ.