Virat ಕೊಹ್ಲಿ ಅಲ್ಲ… ಈಗ ಡುಪ್ಲಸಿಸ್ RCB ಸ್ಟಾರ್

1 min read
Virat-kohli-has-played-100-matches-without-century saaksha tv

Virat ಕೊಹ್ಲಿ ಅಲ್ಲ… ಈಗ ಡುಪ್ಲಸಿಸ್ RCB ಸ್ಟಾರ್

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಕಳೆದ ಋತುವಿನಲ್ಲಿ ಆರ್ಸಿಬಿ ನಾಯಕತ್ವಕ್ಕೆ ವಿದಾಯ ಹೇಳಿದ್ದ ಕೊಹ್ಲಿ, ಹಿರಿಯ ಬ್ಯಾಟರ್ ಗಾಗಿ ತಂಡದಲ್ಲಿರುವುದಾಗಿ ತಿಳಿಸಿದರು.  

ಹೀಗಾಗಿ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ  ವಿರಾಟ್ ಕೊಹ್ಲಿ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಈ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 119 ರನ್ ಗಳಿಸಿದ್ದಾರೆ.  ಗರಿಷ್ಠ ಸ್ಕೋರ್ 48.

ವಿರಾಟ್ ರ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಖಾರಿವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಈಗ ಕ್ಯಾಪ್ಟನ್ ಅಲ್ಲ, ಅವರು ಕೇವಲ ಸಾಧಾರಣ ಆಟಗಾರ ಎಂಬ ವಿಷಯವನ್ನ ಅರ್ಥ ಮಾಡಿಕೊಳ್ಳಬೇಕು. ವಿರಾಟ್ ಯಾವಾಗಲೂ ಸ್ಟಾರ್ ಆಗಿರಲು ಇಷ್ಟ ಪಡ್ತಾರೆ. ಆದ್ರೆ ಈಗ ಆರ್ ಸಿಬಿಯಲ್ಲಿ ಫಾಫ್ ಡುಪ್ಲಸಿಸ್ ಸ್ಟಾರ್ ಆಗಿದ್ದಾರೆ.

ipl-2022-kevin-pietersen-after-watch-kohli-nets saaksha tv

ಫಾಫ್ ಗೆ ಹೋಟೆಲ್ ನಲ್ಲಿ ವಿಲಾಸವಂತಹ ರೂಮ್ ಕೊಟ್ಟಿದ್ದೋ ಇಲ್ವೋ ಗೊತ್ತಿಲ್ಲ. ಆದ್ರೆ ಕೊಹ್ಲಿಗೆ ಫಾಫ್ ಗಿಂತ ದೊಡ್ಡ ರೂಮ್ ಕೊಟ್ಟಿರುತ್ತಾರೆ. ನಿಜ ಹೇಳಬೇಕಾದ್ರೆ ಒಬ್ಬ ಕ್ಯಾಪ್ಟನ್ ಮತ್ತೆ ಸಾಧಾರಣ ಆಟಗಾರನಾಗಿ ಬದಲಾಗೋದು ತುಂಬಾ ಕಷ್ಟ. ಪ್ರಮುಖ ನಿರ್ಧಾರಗಳಲ್ಲಿ ನಿಮ್ಮ ಪಾತ್ರ ಇರೋದಿಲ್ಲ.  ಮೊದಲಿನಂತೆ ಪ್ರಾಬಲ್ಯ ಪ್ರದರ್ಶಿಸಲು ಸಾಧ್ಯವಾಗದು.

ನೀವು ನಾಯಕರಾಗಿದ್ದಾಗ ಅಭಿಮಾನಿಗಳು ಮತ್ತು ತಂಡದ ಸಹ ಆಟಗಾರರು ನಿಮ್ಮನ್ನು ನೋಡುವ ರೀತಿಯೇ ಬೇರೆ. ಆದರೆ, ಸೋಲ್ಜರ್ ಆಗಿ ಮತ್ತೆ ತಂಡದಲ್ಲಿ ಬೆರೆಯುತ್ತಾರಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.  ಕೊಹ್ಲಿ ಇನ್ನೂ ಸಂಪೂರ್ಣ ಫಾರ್ಮ್‌ಗೆ ಬಂದಿಲ್ಲ, ಸ್ವಲ್ಪ ಸಮಯ ಬೇಕು ಎಂದು ಪೀಟರ್ ಸನ್ ಅಭಿಪ್ರಾಯಪಟ್ಟಿದ್ದಾರೆ.

 

ನೆಟ್ಸ್‌ನಲ್ಲಿ ಕೊಹ್ಲಿ ಪ್ರಾಕ್ಟೀಸ್ ಬಗ್ಗೆ ಮಾತನಾಡಿದ ಪೀಟರ್ ಸನ್,  ವಿರಾಟ್ ತನ್ನ ಕೆಲಸ ತಾನು ಮಾಡಿಕೊಂಡು ಹೋಗುತ್ತಿದ್ದಾರೆ. ಒಂದು ನಗು ಇಲ್ಲ. ಹಲೋ  ಹೇಳೋದಿಲ್ಲ. ಯಾರೊಂದಿಗೂ ಬೆರೆಯುತ್ತಿಲ್ಲ. ಪ್ರತಿಸಾರಿ ನಾನು ಆಟದ ಮೇಲೆ ದೃಷ್ಟಿ ನೆಟ್ಟಿದ್ದೇನೆ ಎನ್ನುತ್ತಾ ಸೀರಿಯಸ್ ಆಗಿ ಇರುತ್ತಾರೆ.  ಕೊಹ್ಲಿ ಒತ್ತಡದಲ್ಲಿದ್ದು, ಅದನ್ನು ಮೀರಿದರೆ ಮೊದಲಿನಂತೆ ಬ್ಯಾಟ್ ಬೀಸಬಹುದು ಎಂದು  ಪೀಟರ್ ಸನ್ ಸಲಹೆ ನೀಡಿದ್ದಾರೆ. ipl-2022-kevin-pietersen-after-watch-kohli-nets

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd