IPL 2022 | ಕಿರಾನ್ ಪೋಲಾರ್ಡ್ ಬರ್ತ್ ಡೇ.. ಮುಂಬೈಗೆ ಲಕ್ಕಿಡೇ  

1 min read
IPL 2022 Kiran Pollard Birthday Luckyday for Mumbai saaksha tv

IPL 2022 Kiran Pollard Birthday Luckyday for Mumbai saaksha tv

IPL 2022 | ಕಿರಾನ್ ಪೋಲಾರ್ಡ್ ಬರ್ತ್ ಡೇ.. ಮುಂಬೈಗೆ ಲಕ್ಕಿಡೇ  

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಆ ಮೂಲಕ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮೂರನೇ ಗೆಲುವು ಸಾಧಿಸಿದೆ.

ಆದ್ರೆ ಇಲ್ಲಿ ವಿಶೇಷ ಏನಂದರೇ ಮೇ 12 ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಕಿರಾನ್ ಪೋಲಾರ್ಡ್ ಅವರು ಜನ್ಮದಿನ.  ಈ ದಿನಾಂಕದಂದು ಮುಂಬೈ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಹೌದು..! ಪೊಲಾರ್ಡ್ ಅವರ ಜನ್ಮದಿನವು ಯಾವಾಗಲೂ ಮುಂಬೈ ಇಂಡಿಯನ್ಸ್‌ಗೆ ಅದೃಷ್ಟಕರವಾಗಿದೆ. ಮುಂಬೈ ಈ ದಿನ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.

ಪೊಲಾರ್ಡ್ 2010 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಅಂದಿನಿಂದ ಅವರು ಈ ತಂಡದ ಭಾಗವಾಗಿದ್ದಾರೆ. ಪೊಲಾರ್ಡ್ ಅವರ ಜನ್ಮದಿನದಂದು ಅಂದರೆ ಮೇ 12 ರಂದು ಮುಂಬೈ ಇಂಡಿಯನ್ಸ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ ಮತ್ತು ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ.

IPL 2022 Kiran Pollard Birthday Luckyday for Mumbai saaksha tv
IPL 2022 Kiran Pollard Birthday Luckyday for Mumbai saaksha tv

2012ರಲ್ಲಿ ಪೊಲಾರ್ಡ್ ಜನ್ಮದಿನದಂದು ಮುಂಬೈ ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯ ಆಡಿತ್ತು. ಈ ಪಂದ್ಯದಲ್ಲಿ ಮುಂಬೈ ತಂಡ ಕೆಕೆಆರ್ ತಂಡವನ್ನು 27 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಪೊಲಾರ್ಡ್‌ಗೆ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. ಮತ್ತೊಂದೆಡೆ, ಪೊಲಾರ್ಡ್ ಜನ್ಮದಿನದಂದು ಮುಂಬೈ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಮುಂಬೈ 7 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಪೊಲಾರ್ಡ್ 7 ಎಸೆತಗಳಲ್ಲಿ 6 ರನ್ ಗಳಿಸಿದರು.

ಇದೇ ಸಮಯದಲ್ಲಿ ಪೊಲಾರ್ಡ್ ಅವರ ಜನ್ಮದಿನದಂದು ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಮುಂಬೈ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.  

ಅದರಂತೆ ಗುರುವಾರ ಕೂಡ ಅದೇ ರಿಸಲ್ಟ್ ಮರುಕಳಿಸಿದೆ. ಗುರುವಾರ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಆದ್ರೆ ಈ ಪಂದ್ಯದಲ್ಲಿ ಕಿರಾನ್ ಪೋಲಾರ್ಡ್ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳಿಲ್ಲ.  ಈ ಸೀಸನ್ ನಲ್ಲಿ ಪೋಲಾರ್ಡ್ ಅತ್ಯಂತ ಕೆಟ್ಟ ಫಾರ್ಮ್ ನಲ್ಲಿದ್ದಾರೆ. ಅವರು  ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಕೇವಲ 144 ರನ್ ಗಳಿಸಿದ್ದಾರೆ. IPL 2022 Kiran Pollard Birthday Luckyday for Mumbai

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd