IPL 2022 : ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ರಾಹುಲ್
ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಐಪಿಎಲ್-2022ರಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಶತಕ ಬಾರಿಸಿದ್ದರು.
ಈ ಪಂದ್ಯದಲ್ಲಿ ರಾಹುಲ್ 62 ಎಸೆತಗಳಲ್ಲಿ 103 ರನ್ ಗಳಿಸಿದರು.
ಈ ಋತುವಿನಲ್ಲಿ ಇದು ರಾಹುಲ್ ಅವರ ಎರಡನೇ ಶತಕವಾಗಿದೆ.
ಮೊದಲ ಶತಕ ಮುಂಬೈ ಇಂಡಿಯನ್ಸ್ ವಿರುದ್ಧವೇ ಆಗಿತ್ತು.

ಏಪ್ರಿಲ್ 16 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಶತಕ ಸಿಡಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಹುಲ್ ಅವರು ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ಧಾರೆ.
ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಸೆಂಚೂರಿಗಳು ದಾಖಲಿಸಿದ ಬ್ಯಾಟರ್ ಆಗಿ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದರು.
ರೋಹಿತ್ ಶರ್ಮಾ ಆರು ಶತಕ ಸಿಡಿಸಿದ್ದಾರೆ. ರಾಹುಲ್ ಅಂತಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡು, ಐಪಿಎಲ್ ನಲ್ಲಿ ನಾಲ್ಕು ಸೆಂಚೂರಿ ಸಿಡಿಸಿದ್ದಾರೆ.
ಅದೇ ರೀತಿ ಐಪಿಎಲ್ ನಲ್ಲಿ ಅತ್ಯಧಿಕ ಶತಕ ಸಾಧಿಸಿದ ಭಾರತದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಐದು ಸೆಂಚೂರಿಗಳೊಂದಿಗೆ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೇ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ipl-2022-kl-rahul-equals-rohit-shrama-record