IPL 2022 | ನೋ ಬಾಲ್ ವಿವಾದದ ಬಗ್ಗೆ ಕುಮಾರ್ ಸಂಗಾಕ್ಕರ್ ಹೇಳಿದ್ದೇನು..?
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಕೊನೆಯ ಓವರ್‌ನಲ್ಲಿ ನೊ ಬಾಲ್ ವಿವಾದವು ಬಿಸಿ ಟಾಪಿಕ್ ಆಗಿದೆ.
ಆದರೆ, ಈ ಪಂದ್ಯದಲ್ಲಿ ಡೆಲ್ಲಿ ನಾಯಕ ರಿಷಬ್ ಪಂತ್ ಅವರ ನಡೆಯ ಬಗ್ಗೆ ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ.
ಇನ್ನೂ ಕೆಲವರು ಪಂತ್ ಗೆ ಬೆಂಬಲವಾಗಿ ನಿಂತಿದ್ದಾರೆ.
ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ನೋ ಬಾಲ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಪಂದ್ಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅಂಪೈರ್ ಕೈಯಲ್ಲಿರುತ್ತದೆ ಎಂದಿದ್ದಾರೆ.

”ಯಾವುದೇ ಪಂದ್ಯದಲ್ಲಿ ಅಂಪೈರ್‌ಗಳು ಆಟವನ್ನು ನಿಯಂತ್ರಿಸುತ್ತಾರೆ ಎಂಬುದು ನನ್ನ ಅಭಿಪ್ರಾಯ, ಐಪಿಎಲ್‌ನಲ್ಲಿ ಯಾವಾಗಲೂ ತೀವ್ರ ಒತ್ತಡ ಮತ್ತು ಸಸ್ಪೆನ್ಸ್ ಇರುತ್ತದೆ.
ಹಾಗಾಗಿ ಅಂಪೈರ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧವಾಗಿರಬೇಕು.
ಏಕೆಂದರೆ ಮೈದಾನದಲ್ಲಿ ಅಂಪೈರ್‌ಗಳ ಕೆಲಸ ತುಂಬಾ ಕಠಿಣವಾಗಿರುತ್ತದೆ.
ಸಹಾಯ ಸಿಬ್ಬಂದಿಯಾಗಿ ನಮ್ಮ ಕೆಲಸ.. ಆಟಗಾರರಿಗೆ ಮೊದಲೇ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಸ್ಪಷ್ಟವಾಗಿ ತಿಳಿಸುವುದೇ ಆಗಿರುತ್ತದೆ ಎಂದಿದ್ದಾರೆ. ipl-2022-kumar-sangakkara-infamous-no-ball-incident