ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಯಿಂಗ್ 11
ಇದೇ ಮೊದಲ ಬಾರಿಗೆ ಇಂಡಿಯಲ್ ಪ್ರಿಮಿಯರ್ ಲೀಗ್ ಗೆ ಎಂಟ್ರಿ ಕೊಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ ಲೀಗ್ ಹಂತದಲ್ಲಿ ಬೊಂಬಾಟ್ ಪ್ರದರ್ಶನ ನೀಡಿ ಪ್ಲೇ ಆಫ್ಸ್ ಪ್ರವೇಶಿಸಿದೆ.
ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 9 ಪಂದ್ಯಗಳಲ್ಲಿ ಜಯ ಸಾಧಿಸಿ, ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದ್ರೆ ರನ್ ರೇಟ್ ಆಧಾರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಲಕ್ನೋ ತಂಡ ಇಂದು ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ತಂಡದ ವಿರುದ್ಧ ಗುದ್ದಾಟ ನಡೆಸಲಿದೆ.
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಮೊದಲ ಎಲಿಮಿನೇಟರ್ ಪಂದ್ಯಕ್ಕೆ ಕೊಲ್ಕತ್ತಾದ ಈಡರ್ನ್ಸ್ ಮೈದಾನ ಸಜ್ಜಾಗಿದೆ. ಮುಂದಿನ ಕ್ವಾಲಿಫೇಯರ್ ಗೆ ತಲುಪಲು ಇಲ್ಲಿ ಆರ್ ಸಿಬಿ ಮತ್ತು ಲಕ್ನೋ ತಂಡ ಸೆಣಸಲಿವೆ.
ಅಂದಹಾಗೆ ಆರ್ ಸಿಬಿ ತಂಡ ಲೀಗ್ ಹಂತದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಮಾತ್ರ ಸೆಣಸಿತ್ತು. ಆಗ ಬೆಂಗಳೂತು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ಗಳಿಂದ ಜಯ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ತಂಡ ಆರ್ ಸಿಬಿ ವಿರುದ್ಧ ಸೇಡು ತೀರಿಸಿಕೊಂಡು ಮುಂದಿನ ಹಂತಕ್ಕೆ ತಲುಪುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಆದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲಾರ್ಧದಲ್ಲಿ ತೋರಿದ ಸ್ಥಿರ ಪ್ರದರ್ಶನವನ್ನು ಈಗ ತೋರುತ್ತಿಲ್ಲ. ಮುಖ್ಯವಾಗಿ ಲಕ್ನೋ ತಂಡದ ಗೆಲುವು ನಿಂತಿರೋದೇ ಮೊದಲ ಮೂವರು ಬ್ಯಾಟರ್ ಗಳ ಮೇಲೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಬ್ಯಾಟಿಂಗ್ ನಲ್ಲಿ ಹೆಚ್ಚು ನಂಬಿಕೊಂಡಿರುವುದು ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರನ್ನು. ಇವರಿಬ್ಬರು ಉತ್ತಮ ಆರಂಭ ನೀಡಿದ್ರೆ, ದೀಪಕ್ ಹೂಡಾ ಅಬ್ಬರಿಸುತ್ತಾರೆ. ಇವರನ್ನು ಹೊರತು ಪಡಿಸಿದ್ರೆ ಮಾರ್ಕಸ್ ಸ್ಟೋಯ್ನಿಸ್ ಮೇಲೆ ಲಕ್ನೋ ತಂಡಕ್ಕೆ ಹೆಚ್ಚು ನಂಬಿಕೆ ಇದೆ. ಹೀಗಾಗಿ ಸ್ಟೋಯ್ನಿಸ್ ಇಂದಿನ ಪಂದ್ಯದಲ್ಲಿ ಬೇಗ ಬ್ಯಾಟಿಂಗ್ ಗೆ ಬರುವ ಸಾಧ್ಯತೆಗಳಿವೆ.
ಈ ನಾಲ್ವರು ಬ್ಯಾಟರ್ ಗಳು ಮಾತ್ರವಲ್ಲದೇ ಕೃನಾಲ್ ಪಾಂಡ್ಯ,ಆಯುಷ್ ಬಡೋನಿ ಕೂಡ ಅಪಾಯಕಾರಿ ಎನ್ನುವುದು ಮರೆಯುವಂತಿಲ್ಲ. ಇವರು ಕ್ರೀಸ್ ಗೆ ಕಚ್ಚಿ ನಿಂತರೇ ಎದುರಾಳಿಗಳು ಧೂಳಿಪಟವಾಗೋದು ಪಕ್ಕಾ. ಆದ್ರೆ ಈ ಇಬ್ಬರೂ ಈಗ ಟಚ್ ಕಳೆದುಕೊಂಡಂತೆ ಕಾಣುತ್ತಿದೆ. ಆಯುಷ್ ಬಡೋನಿ ಅವರಿಗೆ ಅತೀಯಾದ ಆತ್ಮವಿಶ್ವಾಸವೇ ಮುಳುವಾಗುತ್ತಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವತ್ತ ಚಿತ್ತವನ್ನಿಡಬೇಕಿದೆ. ಜೇಸನ್ ಹೋಲ್ಡರ್ ಕೂಡ ಸಿಕ್ಸರ್ ಗಳಿಂದ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.
ಬೌಲಿಂಗ್ ನಲ್ಲಿ ದುಷ್ಮಂತಾ ಚಮೀರಾ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಇವರಿಗೆ ಆವೇಶ್ ಖಾನ್, ಮೊಶಿನ್ ಖಾನ್ ಸಾಥ್ ನೀಡಬೇಕಿದೆ. ಜೊತೆಗೆ ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೋಯ್ನಿಸ್, ರವಿ ಬಿಷ್ಣೋಯಿ ಕೂಡ ಎದುರಾಳಿಗಳಿಗೆ ಕಂಟಕವಾಗಬಹುದು.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್
ಕೆ.ಎಲ್ ರಾಹುಲ್ (ನಾಯಕ)
ಕ್ವಿಂಟನ್ ಡಿ ಕಾಕ್
ದೀಪಕ್ ಹೂಡಾ
ಕೃನಾಲ್ ಪಾಂಡ್ಯ
ಆಯುಷ್ ಬಡೋನಿ
ಮಾರ್ಕಸ್ ಸ್ಟೋನಿಸ್
ಜೇಸನ್ ಹೋಲ್ಡರ್
ಮೋಶಿನ್ ಖಾನ್
ರವಿ ಬಿಷ್ಣೋಯ್
ದುಶ್ಮಂತ್ ಚಾಮೀರಾ
ಆವೇಶ್ ಖಾನ್
ipl-2022-lsg playing 11 for today match