IPL 2022 | ಮೈದಾನದಲ್ಲಿಯೇ ಅಯ್ಯರ್ ಮೇಲೆ ಮಯಾಂಕ್ ಫೈಯರ್..!
1 min read
IPL 2022 | ಮೈದಾನದಲ್ಲಿಯೇ ಅಯ್ಯರ್ ಮೇಲೆ ಮಯಾಂಕ್ ಫೈಯರ್..!
ಐಪಿಎಲ್-2022 ರ ಎಂಟನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್ಗಳಿಂದ ಸೋತಿದೆ.
ಆದರೆ, ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಕೊಂಚ ಅಸಹನೆ ಹೊರಹಾಕಿದ್ದಾರೆ.
ಪಂದ್ಯ ಕೆಕೆಆರ್ ಕೈಗೆ ಹೋಗುತ್ತಿದ್ದಂತೆ ಮಯಾಂಕ್ ಸಂಯಮ ಕಳೆದುಕೊಂಡರು.
ಕೆಕೆಆರ್ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ವೆಂಕಟೇಶ್ ಅಯ್ಯರ್ ಮೊದಲ ಎಸೆತವನ್ನು ಮಿಡ್ ಆಫ್ ಕಡೆಗೆ ಆಡಿದರು.
ಆದರೆ, ಮಿಡ್ ಆಫ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಾರುಖ್ ಖಾನ್ ಚೆಂಡನ್ನು ಸರಿಯಾಗಿ ಹಿಡಿಯುವಲ್ಲಿ ವಿಫಲರಾದರು.
ತಕ್ಷಣ ತಾಳ್ಮೆ ಕಳೆದುಕೊಂಡ ಮಯಾಂಕ್ ಅಗರ್ವಾಲ್ .. ಶಾರುಖ್ ಖಾನ್ ಮೇಲೆ ಫೈಯರ್ ಆಗಿದ್ದಾರೆ. https://twitter.com/i/status/1509927855785795584
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು, ‘ಯಾಕೆ ಹಾಗೆ ಕೂಗುತ್ತಿದ್ದೀರಿ ಮಯಾಂಕ್, ನಾಯಕನಾಗಿ ಇದು ಸೂಕ್ತವಲ್ಲ ಎಂದಿದ್ದಾರೆ. ipl 2022 mayank-agarwal-anger