IPL 2022 | ಪಂಜಾಬ್ ಕಿಂಗ್ಸ್ ಗೆ ಕನ್ನಡಿಗ ಮಯಾಂಕ್ ಮಹಾರಾಜ..!
ಐಪಿಎಲ್-2022 ರ ಅಂಗವಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಈ ಕುರಿತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೋಮವಾರ ಅಧಿಕೃತ ಹೇಳಿಕೆ ನೀಡಿದೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನಾ ರಿಡೈನ್ಡ್ ಪಾಲಿಸಿಯಲ್ಲಿ ಪಂಜಾಬ್ ತಂಡ ಮಯಾಂಕ್ ಅಗರ್ ವಾಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿತ್ತು.
ಮೆಗಾ ಹಜಾರಿನಲ್ಲಿ ಪಂಜಾಬ್ ಫ್ರಾಂಚೈಸಿ ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಕಗಿಸೊ ರಬಾಡ ಅವರಂತಹ ಸ್ಟಾರ್ ಆಟಗಾರರನ್ನು ಖರೀದಿಸಿದೆ.
ಮೊದಲು ಶಿಖರ್ ಧವನ್ ಅವರು ಪಂಜಾಬ್ ತಂಡದ ನಾಯಕರಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಪಂಜಾಬ್ ಫ್ರಾಂಚೈಸಿ ಕನ್ನಡಿಗ ಮಯಾಂಕ್ ಮಣೆ ಹಾಕಿದೆ.
ಮಯಾಂಕ್ ಅಗರ್ವಾಲ್ ಮೊದಲು ಡೇರ್ ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಬ್ಯಾಟ್ ಬೀಸಿದ್ದರು. 2018 ರಿಂದ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಮಯಾಂಕ್ ಗೆ ಪಂಜಾಬ್ ಫ್ರಾಂಚೈಸಿ 12 ಕೋಟಿ ಕೊಟ್ಟು ಉಳಿಸಿಕೊಂಡಿದೆ. ಪಂಜಾಬ್ ನಾಯಕನಾಗಿ ಆಯ್ಕೆಯಾದ ನಂತರ ಮಯಾಂಕ್ ಪ್ರತಿಕ್ರಿಯಿಸಿದ್ದಾರೆ.
ನಾನು 2018 ರಿಂದ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದೇನೆ. ಪಂಜಾಬ್‌ನಂತಹ ಮಹತ್ವಾಕಾಂಕ್ಷೆಯ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರೋದು ನಾನು ಗೌರವವಾಗಿ ಭಾವಿಸುತ್ತೇನೆ . ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಈ ವರ್ಷದ ಐಪಿಎಲ್ ಮಾರ್ಚ್ 26 ರಂದು ಆರಂಭವಾಗಲಿದೆ. ipl-2022-mayank-agarwal-appointed-punjab-kings-captain saaksha tv