IPL 2022 | ಆ ರೀತಿ ಮಾಡಿದ್ದು ತಪ್ಪು.. ಆದ್ರೆ ನಷ್ಟ ಆಗಿದ್ದು ನಮಗೆ
ಮ್ಯಾಚ್ ಪೂರ್ತಿ ರಾಜಸ್ತಾನ್ ರಾಯಲ್ಸ್ ತಂಡದ ಬೌಲರ್ ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ರು. ಆದ್ರೆ ಕೊನೆಯ ಔವರ್ ನಲ್ಲಿ ಪೊವೆಲ್ ನಮ್ಮಲ್ಲಿ ಗೆಲುವಿನ ಭರವಸೆ ಮೂಡಿಸಿದ್ರು. ನಿಜ ಹೇಳಬೇಕಾದ್ರೆ ಆ ನೋ ಬಾಲ್ ನಮಗೆ ತುಂಬಾ ಅಗತ್ಯವಿತ್ತು. ಆದ್ರೆ ನನ್ನ ಕೈಯಲ್ಲಿ ಏನೂ ಇರಲಿಲ್ಲ. ಇದರಿಂದ ನಮಗೆ ತೀವ್ರ ನಿರಾಸೆ ಉಂಟಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಬೇಸರ ಹೊರಹಾಕಿದ್ದಾರೆ.
ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿಗೆ ಅಂತಿಮ ಓವರ್‌ನಲ್ಲಿ 36 ರನ್‌ಗಳ ಅಗತ್ಯವಿತ್ತು. ಮೆಕಾಯ್ ಬೌಲಿಂಗ್ ನ ಮೊದಲ ಮೂರು ಎಸೆತಗಳನ್ನು ರೋವ್‌ಮನ್ ಪೊವೆಲ್ ಸಿಕ್ಸರ್ ಗಟ್ಟಿದರು. ಆದ್ರೆ ಮೂರನೇ ಬಾಲ್ ಪುಲ್ ಟಾಸ್ ಬಂದ ಕಾರಣ ಡೆಲ್ಲಿ ಡಗೌಟ್ ನಲ್ಲಿದ್ದವರು ನೋ ಬಾಲ್ ಎಂದು ಗೊಂದಲ ಸೃಷ್ಟಿಸಿದರು. ಕ್ರೀಸ್ ನಲ್ಲಿದ್ದ ಬ್ಯಾಟರ್ ಗಳನ್ನು ಪಂತ್ ವಾಪಸ್ ಬರುವಂತೆ ಹೇಳಿದ್ರು. ಆದ್ರೂ ಅಂಪೈರ್ ತಮ್ಮ ನಿರ್ಧಾರವನ್ನ ಬದಲಾಯಿಸಲಿಲ್ಲ.
ಪಂದ್ಯದ ನಂತರ ಮಾತನಾಡಿದ ಪಂತ್, ಅಂಪೈರ್ ವಿರುದ್ಧ ಅಸಹನೆ ವ್ಯಕ್ತಪಡಿಸುವ ಮೂಲಕ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದರು. “ಡಗೌಟ್‌ನಲ್ಲಿರುವ ಪ್ರತಿಯೊಬ್ಬರೂ ಆ ಚೆಂಡಿನ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ವಾಸ್ತವವಾಗಿ, ಮೂರನೇ ಅಂಪೈರ್ ಮಧ್ಯಪ್ರವೇಶಿಸಿ ಅದನ್ನು ನೋ ಬಾಲ್ ಎಂದು ಘೋಷಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಆಮ್ರೆ ಅವರನ್ನು ಮೈದಾನಕ್ಕೆ ಕಳುಹಿಸಿದ ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪಂತ್, ನಮ್ಮ ವಿಚಾರದಲ್ಲಿ ನಡೆದಿದ್ದು ಯಾವುದು ಸರಿ ಇರಲಿಲ್ಲ ಎಂದು ಬೇಸರ ಹೊರಹಾಕಿದರು. ಅಲ್ಲದೇ ಈ ಸೀಸನ್ ನಲ್ಲಿ ಅಂಪೈರಿಂಗ್ ಎಷ್ಟು ಚೆನ್ನಾಗಿದೆ ಅಂತಾ ಎಲ್ಲರೂ ನೋಡುತ್ತಿದ್ದಾರೆ ಎಂದು ಪಂತ್ ವ್ಯಂಗ್ಯವಾಡಿದರು.
ಇನ್ನು ತಮ್ಮ ತಂಡದ ಕಳಪೆ ಬೌಲಿಂಗ್ ಬಗ್ಗೆ ಮಾತನಾಡಿದ ಪಂತ್, ನಾವು ಆರಂಭದಲ್ಲಿ ಇನ್ನೂ ಉತ್ತಮವಾಗಿ ಬೌಲಿಂಗ್ ಮಾಡಬೇಕಿತ್ತು ಎಂದರು.
ಇನ್ನು ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 2 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್‌ಗಳಿಸುವ ಮೂಲಕ 15 ರನ್‌ಗಳ ಸೋಲೊಪ್ಪಿಕೊಂಡಿತು.
ipl-2022-pant-no-ball-decision-3rd-umpire-should-have-interfered