IPL 2022 | ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಪಂಜಾಬ್
ಇಂಡಿಯನ್ ಪ್ರಿಮಿಯರ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ. ಆ ಮೂಲಕ ಪಂಜಾಬ್ ತಂಡ ಗೆಲುವಿನೊಂದಿಗೆ ಟೂರ್ನಿಯ ಅಭಿಯಾನ ಮುಗಿಸಿದ್ರೆ, ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲಿನೊಂದಿಗೆ 15 ನೇ ಆವೃತ್ತಿಗೆ ಗುಡ್ ಬೈ ಹೇಳಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಾಬಾದ್, ಬ್ಯಾಟಿಂಗ್ ವೈಫಲ್ಯ ಕಂಡಿತು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು.
ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್, 15.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 160 ರನ್ಗಳಿಸುವ ಮೂಲಕ 5 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಹೈದ್ರಾಬಾದ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಪ್ರಿಯಮ್ ಗಾರ್ಗ್ 4 ರನ್ ಗಳಿಸಿ ಔಟ್ ಆದರು.
ಆದರೆ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮ 43 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ರಾಹುಲ್ ತ್ರಿಪಾಠಿ(20), ಐಡೆನ್ ಮಾರ್ಕ್ರಂ(21) ರನ್ ಗಳಿಸಿದರು.
ನಂತರ ಬಂದ ನಿಕೋಲಸ್ ಪೂರನ್ 5 ರನ್ ಗಳಿಗೆ ಆಟ ಮುಗಿಸಿದರು. ಕೊನೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್(25) ಹಾಗೂ ರೊಮಾರಿಯೊ ಶೆಫರ್ಡ್ (26 ಉಪಯುಕ್ತ ರನ್ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಪರಿಣಾಮ ಹೈದ್ರಾಬಾದ್ 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಹೈದ್ರಾಬಾದ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಸಾಧಾರಣ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಜಾನಿ ಬೈರ್ಸ್ಟೋವ್ 23 ರನ್ ಗಳಿಸಿ ಹೊರನಡೆದರೆ. ಶಿಖರ್ ಧವನ್ 39 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ನಂತರದಲ್ಲಿ ಬಂದ ಶಾರೂಕ್ ಖಾನ್(19), ಮಯಂಕ್ ಅರ್ಗರ್ವಾಲ್(1) ಹಾಗೂ ಜಿತೇಶ್ ಶರ್ಮ(19) ನಿರೀಕ್ಷಿತ ಆಟವಾಡಲಿಲ್ಲ. ಈ ವೇಳೆ ಕಣಕ್ಕಿಳಿದ ಲಿಯಮ್ ಲಿವಿಂಗ್ಸ್ಟೋನ್(49*) ಕೇವಲ 22 ಬಾಲ್ ಗಳಲ್ಲಿ 5 ಸಿಕ್ಸ್ ಹಾಗೂ 2 ಬೌಂಡರಿ ನೆರವಿನಿಂದ ತಂಡಕ್ಕೆ ಗೆಲುವು ತಂದುಕೊಟ್ಟರು.