IPL 2022 | ರಬಾಡ ಖಾತೆಯಲ್ಲಿ ಅಪರೂದ ದಾಖಲೆ
ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಕ್ಯಾಶ್ ರಿಚ್ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಡೇಲ್ ಸ್ಟೇನ್ (97 ವಿಕೆಟ್) ನಿರ್ಮಿಸಿದ್ದ ದಾಖಲೆಯನ್ನು ರಬಾಡ ಮುರಿದರು.
ಐಪಿಎಲ್ ನಲ್ಲಿ 62 ಪಂದ್ಯಗಳನ್ನಾಡಿರುವ ರಬಾಡ 98 ವಿಕೆಟ್ ಪಡೆದು 100 ವಿಕೆಟ್ ಮೈಲುಗಲ್ಲಿನತ್ತ ಸಾಗುತ್ತಿದ್ದಾರೆ.
ಮೇ 22 ರಂದು ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಬಾಡ ಇನ್ನೂ 2 ವಿಕೆಟ್ ಪಡೆದರೆ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆ ಬರೆಯಲಿದ್ದಾರೆ.
ಆದರೆ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ವಿರುದ್ಧ ಸೋತಿದ್ದು ಪ್ಲೇ ಆಫ್ ಅವಕಾಶವನ್ನು ಬಹುತೇಕ ಕಠಿಣಗೊಳಿಸಿಕೊಂಡಿದೆ.
ಸದ್ಯ ತಂಡ 13 ಪಂದ್ಯಗಳಿಂದ 6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ನಾಲ್ಕನೇ ಸ್ಥಾನದಲ್ಲಿದೆ.
ಆದರೆ ತಾಂತ್ರಿಕವಾಗಿ ಪಂಜಾಬ್ ನ ಪ್ಲೇಆಫ್ ಅವಕಾಶಗಳು ಇನ್ನೂ ಜೀವಂತವಾಗಿವೆ.
ಮುಂದಿನ ಪಂದ್ಯಗಳಲ್ಲಿ ಆರ್ ಸಿಬಿ ಗುಜರಾತ್ ಎದುರು ಸೋತರೇ, ಡೆಲ್ಲಿ ಮುಂಬೈ ವಿರುದ್ಧ ಪರಭಾವಗೊಂಡರೇ, ಸನ್ ರೈಸರ್ಸ್-ಪಂಜಾಬ್ ಪಂದ್ಯ ನಿರ್ಣಾಯಕವಾಗಲಿದೆ.
ಈ ಪಂದ್ಯದಲ್ಲಿ ಪಂಜಾಬ್ ಗೆದ್ದರೆ ಡೆಲ್ಲಿ ಆರ್ ಸಿಬಿ (14 ಅಂಕ) ಸಮಬಲ ಸಾಧಿಸಲಿದೆ. ipl-2022-rabada-leading-wicket-taker-south-africa