Ajinkya Rahane : ಮೂರು ಚಾನ್ಸ್ ಸಿಕ್ಕರೂ ಪ್ರಯೋಜನವೇನು..?
ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ಒಂದು ಕುತೂಹಲಕಾರಿ ಘಟನೆ ನಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 215 ರನ್ ಗಳಿಸಿತು.
ಪೃಥ್ವಿ ಶಾ 51 ಮತ್ತು ವಾರ್ನರ್ 61 ರನ್ ಗಳಿಸಿದರು.
ಕೊನೆಯಲ್ಲಿ ಅಕ್ಷರ್ ಪಟೇಲ್ 22* ಮತ್ತು ಶಾರ್ದೂಲ್ ಠಾಕೂರ್ 29* ರನ್ ಗಳಿಸಿದರು.
ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಕೆಕೆಆರ್ ಗೆ ವೆಂಕಟೇಶ್ ಅಯ್ಯರ್ ಮತ್ತು ರಹಾನೆ ಆರಂಭಿಕರಾಗಿ ಬಂದರು.
ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಕೆಕೆಆರ್ ತಂಡಕ್ಕೆ ಮೊದಲ ಓವರ್ ನಲ್ಲಿಯೇ ಆಘಾತ ಎದುರಾಯ್ತು.
ಮುಸ್ತಫಿಜುರ್ ಎಸೆದ ಮೊದಲ ಓವರ್‌ನಲ್ಲಿ ಅಜಿಂಕ್ಯ ರಹಾನೆ ಮೂರು ಬಾರಿ ಔಟ್ ಆಗುವುದರಿಂದ ತಪ್ಪಿಸಿಕೊಂಡರು.
ಓವರ್ ಮೊದಲ ಎಸೆತ ರಹಾನೆ ಪ್ಯಾಡ್ ಮೇಲೆ ಬಂತು. ದೆಹಲಿ ಆಟಗಾರರು ಔಟ್ ಎಂದು ಅಂಪೈರ್ ಗೆ ಮನವಿ ಮಾಡಿಕೊಂಡರು.
ಆಗ ಅಂಪೈರ್ ಔಟ್ ನೀಡಿದ್ರು. ಕೂಡಲೇ ರಹಾನೆ ಡಿಆರ್ ಎಸ್ ಮೊರೆ ಹೋದರು. ಡಿಆರ್ ಎಸ್ ನಲ್ಲಿ ರಹಾನೆ ಪರ ರಿಸಲ್ಟ್ ಬಂತು.
ಆ ನಂತರ ಎರಡನೇ ಎಸೆತವೂ ಅದೇ ಮಾದರಿಯಲ್ಲಿ ಬಂದಿತ್ತು.. ಡೆಲ್ಲಿ ಮನವಿಗೆ ಅಂಪೈರ್ ಮದನ್ ಗೋಪಾಲ್ ಮತ್ತೆ ಔಟ್ ಎಂದು ಘೋಷಿಸಿದರು.
ರಹಾನೆ ಮತ್ತೊಮ್ಮೆ ಡಿಆರ್ ಎಸ್ ಪಡೆದರು. ಈ ಬಾರಿ ಕೂಡ ನಾಟೌಟ್ ಎಂದು ಮೂರನೇ ಅಂಪೈರ್ ಘೋಷಿಸಿದರು.
ಇನ್ನು ಮೂರನೇ ಬಾರಿ ವೈಡ್ ಹೋಗುತ್ತಿದ್ದ ಎಸೆತವನ್ನು ರಹಾನೆ ಟಚ್ ಮಾಡಿದರು.
ಆದ್ರೆ ಈ ಬಾರಿ ಡೆಲ್ಲಿ ಹುಡುಗರು ಯಾರೂ ಅಪೀಲ್ ಮಾಡಲು ಹೋಗಲೇ ಇಲ್ಲ.
ವಾಸ್ತವವಾಗಿ ಅಲ್ಟ್ರಾಎಡ್ಜ್‌ನಲ್ಲಿ ಬ್ಯಾಟ್‌ಗೆ ಚೆಂಡು ತಾಕಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಅಪೀಲ್ ಮಾಡದ ಕಾರಣ ರಹಾನೆ ಬಚಾವ್ ಆದರು.
ಆದರೆ ಈ ಮೂರು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ರಹಾನೆ ವಿಫಲರಾದ್ರು.
ಪಂದ್ಯದಲ್ಲಿ 14 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದ ರಹಾನೆ ಖಲೀಲ್ ಅಹ್ಮದ್ ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದ ರಹಾನೆ ಅವರ ಇನ್ನಿಂಗ್ಸ್ ಕೊನೆಗೊಂಡಿತು.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ರಹಾನೆ ಸಕತ್ ಟ್ರೋಲ್ ಆಗುತ್ತಿದ್ದಾರೆ. ipl-2022-rahane-survives-3-deliveries









