IPL 2022 : ಬಟ್ಲರ್ ಸ್ಪೋಟಕ ಶತಕ : RCBಗೆ ಮತ್ತೆ ನಿರಾಸೆ
ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಆಸೆಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ನಿರಾಸೆಯಾಗಿದೆ.
ಅಹ್ಮದಾಬಾದ್ ನಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.
ಆ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ಫೈನಲ್ ಗೆ ಎಂಟ್ರಿಕೊಟ್ಟಿದ್ದರೇ, ಆರ್ ಸಿಬಿ ಮತ್ತೆ ನಿರಾಸೆಯೊಂದಿಗೆ ಟೂರ್ನಿಯಲ್ಲಿ ಆಟ ಮುಗಿಸಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ಗೆ 157 ರನ್ ಕಲೆಹಾಕಿತು.
ಈ ಸವಾಲು ಬೆನ್ನತ್ತಿದ ರಾಜಸ್ಥಾನ್ ಬ್ಯಾಟ್ಸ್ಮನ್ಗಳ ಭರ್ಜರಿ ಪ್ರದರ್ಶನದಿಂದ 18.1 ಓವರ್ಗಳಲ್ಲಿ 3 ವಿಕೆಟ್ಗೆ 161 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಆರ್ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ.
ಬೆಂಗಳೂರು ತಂಡದ ಪರ ಕೆಜಿಎಫ್ ಮತ್ತೆ ವಿಫಲವಾಯ್ತು. ಆರಂಭಿಕ ವಿರಾಟ್ ಕೊಹ್ಲಿ ಏಳು ರನ್ ಗಳಿಸಿ ಔಟ್ ಆದರು.
ನಾಯಕ ಫಾಫ್ ಡುಪ್ಲಸಿಸ್ ಆಟ 25 ಕ್ಕೆ ಮುಕ್ತಾಯವಾಯ್ತು. ಬಳಿಕ ಬಂದ ಗ್ಲೆನ್ ಮ್ಯಾಕ್ಸ್ ವೆಲ್ 24 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಈ ವೇಳೆ ತಂಡಕ್ಕೆ ಆಸರೆಯಾದ ರಜತ್ ಪಟಿದಾರ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
42 ಎಸೆತಗಳಲ್ಲಿ ನಾಲ್ಕು ಬೌಂಡರಿ, ಮೂರು ಸಿಕ್ಸರ್ ಗಳ ನೆರವಿನಿಂದ ರಜತ್ 58 ರನ್ ಗಳಿಸಿ ಔಟ್ ಆದರು.
ಇಲ್ಲಿಂದ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳು ಮೇಲು ಗೈ ಸಾಧಿಸಿದರು.
ದಿನೇಶ್ ಕಾರ್ತಿಕ್ ಆರು ರನ್ ಗಳಿಗೆ ಔಟ್ ಆದ್ರೆ, ಮಹಿಪಾಲ್ ಲೋಮ್ರೋರ್ 8 ರನ್, ಹರ್ಷಲ್ ಪಟೇಲ್ 1 ರನ್ ಗಳಿಸಿ ಔಟ್ ಆದರು.
ಕೊನೆಯಲ್ಲಿ ಶಹಬಾಜ್ ಅಹ್ಮದ್ 12 ರನ್ ಗಳಿ ತಂಡದ ಮೊತ್ತ 157ಕ್ಕೇ ಏರಿಸಿದರು.
ರಾಜಸ್ಥಾನ್ ಪರ ಅದ್ಭುತ ದಾಳಿ ನಡೆಸಿದ ಪ್ರಸಿದ್ಧ್ ಕೃಷ್ಣ ಹಾಗೂ ಮೆಕಾಯ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಆರ್ಸಿಬಿ ನೀಡಿದ 158 ರನ್ಗಳ ಟಾರ್ಗೆಟ್ ಎದುರಿಸಿದ ರಾಜಸ್ಥಾನ್ ಮೊದಲ ವಿಕೆಟ್ಗೆ 61 ರನ್ಗಳ ಅದ್ಭುತ ಆರಂಭ ಪಡೆಯಿತು.
ಯಶಸ್ವಿ ಜೈಸ್ವಾಲ್(21) ರನ್ಗಳಿಸಿ ಔಟಾದರೆ. ಮೊದಲ ಕ್ರಮಾಂಕದಲ್ಲಿ ನಾಯಕ ಸಂಜೂ ಸ್ಯಾಮ್ಸನ್(23) ರನ್ಗಳಿಸಿ ಔಟಾದರು.
ಆದರೆ ಆರ್ಸಿಬಿ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಜಾಸ್ ಬಟ್ಲರ್ 106* ರನ್ ಸ್ಪೋಟಕ ಶತಕ ಸಿಡಿಸಿದರು.
ಉಳಿದಂತೆ ಪಡಿಕ್ಕಲ್(9), ಹೆಟ್ಮಾಯೆರ್(2*) ರನ್ಗಳಿಸಿದರು.