ಭಾರತೀಯ ಬೌಲರ್ ಅರ್ಷದೀಪ್ ಸಿಂಗ್ ಕೇವಲ ಎರಡು ವರ್ಷಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ಎರಡು ವರ್ಷಗಳಲ್ಲಿ 92 ವಿಕೆಟ್ ಉರುಳಿಸುವ ಮೂಲಕ, ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಂತಹ ಖ್ಯಾತನಾಮರ ದಾಖಲೆ ಹಿಂದಿಕ್ಕಿ, ಈ ದಾಖಲೆ ಬರೆದಿರುವುದು ವಿಶೇಷವಾಗಿದೆ.
2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಅಂಗಳಕ್ಕೆ ಕಾಲಿಟ್ಟಿದ್ದ ಅರ್ಷದೀಪ್ ಸಿಂಗ್ ಇಲ್ಲಿಯವರೆಗೆ 59 ಪಂದ್ಯಗಳನ್ನಾಡಿದ್ದಾರೆ. 1222 ಎಸೆತಗಳನ್ನು ಎಸೆದಿರುವ ಅವರು ಒಟ್ಟು 92 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಅತೀ ಹೆಚ್ಚು ವಿಕೆಟ್ ಉರುಳಿಸಿದ ಭಾರತೀಯ ಬೌಲರ್ ಆಗಿದ್ದಾರೆ.
ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಇಲ್ಲಿಯವರೆಗೆ ಅಗ್ರ ಸ್ಥಾನದಲ್ಲಿದ್ದರು. ಭಾರತದ ಪರ 87 ಟಿ20 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ 90 ವಿಕೆಟ್ ಕಬಳಿಸಿದ್ದರು. ಜಸ್ಪ್ರೀತ್ ಬುಮ್ರಾ 70 ಟಿ20 ಪಂದ್ಯಗಳನ್ನಾಡಿ 89 ವಿಕೆಟ್ ಕಬಳಿಸಿದ್ದಾರೆ. ಇದೀಗ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿರುವ ಅರ್ಷದೀಪ್ ಸಿಂಗ್, 92 ವಿಕೆಟ್ಗಳೊಂದಿಗೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗಿ ಎನಿಸಿಕೊಂಡಿದ್ದಾರೆ.
ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. ಅವರು 79 ಇನಿಂಗ್ಸ್ಗಳಲ್ಲಿ 96 ವಿಕೆಟ್ ಕಬಳಿಸಿದ್ದಾರೆ. ಚಹಲ್ ಅವರನ್ನು ಹಿಂದಿಕ್ಕಲು ಅರ್ಷದೀಪ್ ಸಿಂಗ್ಗೆ ಕೇವಲ 5 ವಿಕೆಟ್ಗಳ ಅವಶ್ಯಕತೆಯಿದೆ. ಈ ಸಾಧನೆಯ ಮೇಲೆ ಈಗ ಅರ್ಷದೀಪ್ ಸಿಂಗ್ ಕಣ್ಣಿಟ್ಟಿದ್ದಾರೆ.








