3 ಆಟಗಾರರಿಗಾಗಿ 27 ಕೋಟಿ.. ಏನಿದು RCB ಪ್ಲಾನ್..? ipl-2022-rcb-break-bank-rope-jason-holder
IPL-2022 ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಫ್ರಾಂಚೈಸಿಗಳು ಸಾಕಷ್ಟು ಲೆಕ್ಕಾಚಾರ ಹಾಕಿಕೊಂಡಿವೆ.
ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿಗಾಗಿ ಸಿದ್ಧತೆ ನಡೆಸಿದೆ.
ಆದ್ರೆ ಆರ್ ಸಿಬಿ ಮೆಗಾ ಹರಾಜಿನಲ್ಲಿ ಕೇವಲ ಮೂರು ಆಟಗಾರರಿಗಾಗಿ 27 ಕೋಟಿ ರೂಪಾಯಿ ಮೀಸಲಿಟ್ಟಿದೆಯಂತೆ.
ಹೌದು..! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆಲ್ ರೌಂಡರ್ ಜೇಸನ್ ಹೋಲ್ಡರ್, ಅಂಬಾಟಿ ರಾಯುಡು, ರಿಯಾನ್ ಪರಾಗ್ ಖರೀದಿಗೆ ಪ್ಲಾನ್ ಮಾಡಿಕೊಂಡಿದೆಯಂತೆ.
ಇದಕ್ಕಾಗಿ ಹೋಲ್ಡರ್ ಗೆ 12 ಕೋಟಿ, ಅಂಬಟಿ ರಾಯುಡುಗೆ 8 ಕೋಟಿ ಮತ್ತು ರಿಯಾನ್ ಪರಾಗ್ ಗೆ 7 ಕೋಟಿ ರೂಪಾಯಿ ಮೀಸಲಿಟ್ಟಿದೆಯಂತೆ.
ಈ ಆಟಗಾರರಿಗೆ ಸುಮಾರು 27 ಕೋಟಿ ವ್ಯಯಿಸಿದ್ದರೆ, ಆರ್‌ಸಿಬಿ ವಾಲೆಟ್‌ನಲ್ಲಿ ಇನ್ನೂ 28 ಕೋಟಿ ರೂ ಇರಲಿದೆ.
ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ