ಹಸಿರು ಜೆರ್ಸಿಯಲ್ಲಿ ಆರ್ ಸಿ ಬಿ – ಹೈದರಾಬಾದ್ ಎದುರು ನಿರ್ಣಾಯಕ ಪಂದ್ಯ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022ರ ಋತುವಿನ ಕೊನೆಯ ಮೂರು ನಿರ್ಣಾಯಕ ಪಂದ್ಯಗಳನ್ನ ಸಜ್ಜಾಗುತ್ತಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯವನ್ನ ಸನ್ರೈಸರ್ಸ್ ಹೈದರಾಬಾದ್ ಎದುರು ಆಡಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ಮಧ್ಯಾಹ್ನ 3:30ಕ್ಕೆ ಪಂದ್ಯ ನಿಗದಿಯಾಗಿದೆ. ನಂತರ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯದಾಗಿ ಕಾದಾಡಲಿದೆ. ಪ್ರಸ್ತುತ 12 ಪಾಯಿಂಟಗಳನ್ನ ಗಳಿಸಿರುವ RCB, ಪ್ಲೇ ಆಫ್ ರೇಸ್ ನಲ್ಲಿ ನಿಲ್ಲಬೇಕೆಂದರೆ ಉಳಿದ ಮೂರರಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ.
ಸತತ ಮೂರು ಪಂದ್ಯಗಳಲ್ಲಿ ಸೋತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿಸಿತ್ತು. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮಣಿಸಿ ಮತ್ತೆ ರೇಸ್ ಪ್ರವೇಶಿಸಿದೆ. ಸದ್ಯ ಫಾಫ್ ಡುಪ್ಲೆಸಿಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಕೊನೆಯ ಮೂರು ಪಂದ್ಯಗಳಲ್ಲಿ ಒಂದನ್ನ ಸೋತರೂ ಪ್ಲೇ ಹಾದಿ ಲೆಕ್ಕಾಚಾರದ ಮೇಲೆ ನಿಂತಿರಲಿದೆ.
ಈ ಬೆಳವಣಿಗೆಗಳ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಜೆರ್ಸಿ ಬಣ್ಣವನ್ನ ಬದಲಾಯಿಸಿದೆ. ಪ್ರತೀ ವರ್ಷದಂತೆ ಗೋ ಗ್ರೀನ್ ಎನ್ನವ ಅಭಿಯಾನದ ಅಡಿಯಲ್ಲಿ ತಿಳಿ ಹಸಿರು ಬಣ್ಣದ ಜೆರ್ಸಿ ಧರಿಸಿ ಆಡಲಿದ್ದಾರೆ. ಈ ಹೊಸ ಜೆರ್ಸಿಯೊಂದಿಗೆ ಹೈದರಾಬಾದ್ ಎದುರು ಬೆಂಗಳುರು ತಂಡ ಕಾದಾಡಲಿದೆ. ಪರಿಸರ ಸಂರಕ್ಷಣೆಯ ಸಂದೇಶವನ್ನ ಪ್ರಚುರಪಡಿಸಲು ಜೆರ್ಸಿಯನ್ನು ತಿಳಿ ಹಸಿರು ಬಣ್ಣಕ್ಕೆ ಬದಲಾಯಿಸಲಾಗಿದೆ.