ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | ರಾಯಲ್ಸ್ ಬೇಟೆಗೆ RCB ಯ ಪ್ಲೇಯಿಂಗ್ 11   

Mahesh M Dhandu by Mahesh M Dhandu
May 27, 2022
in Newsbeat, Sports, ಕ್ರಿಕೆಟ್
IPL 2023

IPL 2023

Share on FacebookShare on TwitterShare on WhatsappShare on Telegram

IPL 2022 | ರಾಯಲ್ಸ್ ಬೇಟೆಗೆ RCB ಯ ಪ್ಲೇಯಿಂಗ್ 11   

ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಅಹ್ಮದಾಬಾದ್ ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೇಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ.

Related posts

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

August 3, 2026
ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

August 3, 2026

ಕಳೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ ಸಂಘಟಿತ ಪ್ರದರ್ಶನ ನೀಡಿದೆ. ಲಕ್ನೋ ವಿರುದ್ಧ 14 ರನ್ ಗಳಿಂದ ಆರ್ ಸಿಬಿ ಜಯ ಸಾಧಿಸಿ ಇದೀಗ ಕ್ವಾಲಿಫೇಯರ್ ಪ್ರವೇಶಿಸಿದೆ.  

ಅಂದಹಾಗೆ ಆರ್ ಸಿಬಿ ತಂಡ ಲೀಗ್ ಹಂತದಲ್ಲಿ  ರಾಜಸ್ಥಾನ್ ರಾಯಲ್ಸ್ ವಿರುದ್ಧ  ಎರಡು ಬಾರಿ ಸೆಣಸಿತ್ತು. ಮೊದಲ ಬಾರಿಯ ಗುದ್ದಾಟದಲ್ಲಿ ಬೆಂಗಳೂರು ತಂಡ, ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡಿತ್ತು. ಲೀಗ್ ಹಂತದಲ್ಲಿ ಸಮಬಲದ ಹೋರಾಟ ನಡೆಸಿರುವ ಈ ಉಭಯ ತಂಡಗಳ ಹೋರಾಟ ಇಂದು ಮತ್ತಷ್ಟು ರೋಚಕವಾಗಿರಲಿದೆ.   

ಆದ್ರೆ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಆರ್‌ಸಿಬಿ ಗೆಲುವು ಪಡೆಯಬೇಕೆಂದರೆ, ಆರಂಭಿಕರಾದ ವಿರಾಟ್‌ ಕೊಹ್ಲಿ ಅಥವಾ ಫಾಫ್‌ ಡು ಪ್ಲೆಸಿಸ್ ಅವರಲ್ಲಿ ಒಬ್ಬರು ದೀರ್ಘಾವಧಿ ಬ್ಯಾಟ್‌ ಮಾಡಲೇಬೇಕು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಾಕಿ ಇರುವ ಬಿಗ್ ಇನ್ನಿಂಗ್ಸ್ ಇಂದು ಹೊರಬರಬೇಕು. ಕಳೆದ ಪಂದ್ಯದ ಹೀರೋ ರಜತ್‌ ಪಾಟಿದರ್‌ ಅದೇ ಪ್ರದರ್ಶನವನ್ನು ಮುಂದುವರೆಸಬೇಕು.  ಒಂದು ವೇಳೆ ಟಾಪ್ ಆರ್ಡರ್ ಬ್ಯಾಟರ್ ಗಳು ವೈಫಲ್ಯ ಅನುಭವಿಸಿದ್ರೆ, ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರೋರ್ ತಂಡಕ್ಕೆ ನೆರವಾಗಲು ಸಿದ್ಧರಾಗಿರಬೇಕು. ಮುಖ್ಯವಾಗಿ ಆರಂಭದ ಪಂದ್ಯಗಳಲ್ಲಿ ಮಿಂಚಿದ್ದ ಶಹಬ್ಬಾಸ್ ಅಹ್ಮದ್ ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೇ ತಮ್ಮ ತಾಕತ್ತು ತೋರಿಸಲು ಸಜ್ಜಾಗಿರಬೇಕು. 

ipl-2022-RCB's Playing 11 for the Royals battle saaksha tv
ipl-2022-RCB’s Playing 11 for the Royals battle saaksha tv

ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಹೇಳೋದಾದ್ರೆ, ಜೋಶ್ ಹೇಝಲ್ ವುಡ್, ವನಿಂದು ಹಸರಂಗ ಎಂದಿನಂತೆ ಇಂದು ಮತ್ತಷ್ಟು ಪರಿಣಾಮಕಾರಿಯಾಗಿ ವಿಕೆಟ್ ಬೇಟೆಯಾಡಬೇಕು. ಹರ್ಷಲ್ ಪಟೇಲ್ ತಮ್ಮ ಬಿಗಿ ಬೌಲಿಂಗ್ ದಾಳಿ ಮುಂದುವರಿಸಬೇಕು. ಇನ್ನು ಬಿಗ್ ಮ್ಯಾಚ್ ಪ್ಲೇಯರ್ ಮೊಹ್ಮದ್ ಸಿರಾಜ್ ಪವರ್ ಪ್ಲೇ ನಲ್ಲಿ ತಂಡಕ್ಕೆ ಬ್ರೇಕ್ ಥ್ರ್ಯೂ ಕೊಡಬೇಕು ಹಾಗೇ ರನ್ ಗಳಿಗೆ ಕಡಿವಾಣ ಹಾಕುವತ್ತ ಗಮನ ಹರಿಸಬೇಕು.

ಇಂದಿನ ಪಂದ್ಯ ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವುದರಿಂದ ಸ್ಪಿನ್ನರ್ ಗಳಿಗೆ ಹೆಚ್ಚು ಅನುಕೂಲವಾಗಿರುತ್ತದೆ. ಜೊತೆಗೆ ರಾಜಸ್ಥಾನ್ ತಂಡದಲ್ಲಿ ಮೂವರು ಎಡ ಗೈ ಬೌಲರ್ ಗಳಿದ್ದು, ಮ್ಯಾಕ್ಸ್ ವೆಲ್ ಬೌಲಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಮುಖ್ಯವಾಗಿ  ರಾಜಸ್ಥಾನ್ ತಂಡದ ಇನ್ ಫಾರ್ಮ್ ಬ್ಯಾಟರ್ ಗಳಾದ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಅವರನ್ನ ಬೇಗ ಪೆವಿಲಿಯನ್ ಸೇರಿಸಬೇಕು. 

ಆರ್ ಸಿಬಿ ತಂಡದ ಪ್ಲೇಯಿಂಗ್ ಇಲೆವೆಲ್ ಈಗ ಸೆಟ್ ಆಗಿರುವುದರಿಂದ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಮೈದಾನಕ್ಕೆ ಇಳಿಯಲಿದೆ.

ಆರ್ ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್

ವಿರಾಟ್ ಕೊಹ್ಲಿ

ಫಾಫ್ ಡುಪ್ಲಸಿಸ್

ಗ್ಲೆನ್ ಮ್ಯಾಕ್ಸ್ ವೆಲ್

ರಜತ್ ಪಟಿದಾರ್

ಮಹಿಪಾಲ್ ಲೋಮ್ರೊರ್

ದಿನೇಶ್ ಕಾರ್ತಿಕ್

ಶಹಬ್ಬಾಸ್ ಅಹ್ಮದ್

ವನಿಂದು ಹಸರಂಗ

ಹರ್ಷಲ್ ಪಟೇಲ್

ಜೋಶ್ ಹೆಜಲ್ ವುಡ್

ಮೊಹ್ಮದ್ ಸಿರಾಜ್

Tags: #Saaksha TVipl 2022RCB
ShareTweetSendShare
Join us on:

Related Posts

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ನಿಖಿಲ್ ಕುಮಾರಸ್ವಾಮಿ!: ಆಗಸ್ಟ್ 9 ರಿಂದ ಬಿಡದಿ ಉಳಿಸಿ ಮಹಾ ಪಾದಯಾತ್ರೆ ಆರಂಭ

by Shwetha
August 3, 2026
0

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮತ್ತು ರೈತರ ಭೂಮಿಯನ್ನು ಉಳಿಸಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡಿದ್ದ ಹೋರಾಟವು ಈಗ ಮತ್ತಷ್ಟು ತೀವ್ರತೆ...

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

ಜೆನ್‌ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್

by Shwetha
August 3, 2026
0

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಯುವ ಸಮೂಹದ (ಜೆನ್‌ಜೀ) ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸ್ಯಾಂಡಲ್‌ವುಡ್ ಮೋಹಕತಾರೆ, ಮಾಜಿ ಸಂಸದೆ ರಮ್ಯಾ...

ಅಭಿಜೀತ್ ದೀಪ್ಕೆ ವಿದೇಶಿ ಶಿಕ್ಷಣದ ಹಣದ ಮೂಲ ಯಾವುದು? ಸಿಜೆಪಿ ಸಂಸ್ಥಾಪಕನಿಗೆ ಸಂಕಷ್ಟ:ಪಕ್ಷದ ನೋಂದಣಿ ಮತ್ತು ಕೋಟಿ ರೂಪಾಯಿ ದೇಣಿಗೆ ಬಗ್ಗೆ ಗಂಭೀರ ಪ್ರಶ್ನೆ-ಕಾಕ್ರೋಚ್ ಜನತಾ ಪಾರ್ಟಿ ಅಸಲಿ ಕಥೆಯೇನು?

ಅಭಿಜೀತ್ ದೀಪ್ಕೆ ವಿದೇಶಿ ಶಿಕ್ಷಣದ ಹಣದ ಮೂಲ ಯಾವುದು? ಸಿಜೆಪಿ ಸಂಸ್ಥಾಪಕನಿಗೆ ಸಂಕಷ್ಟ:ಪಕ್ಷದ ನೋಂದಣಿ ಮತ್ತು ಕೋಟಿ ರೂಪಾಯಿ ದೇಣಿಗೆ ಬಗ್ಗೆ ಗಂಭೀರ ಪ್ರಶ್ನೆ-ಕಾಕ್ರೋಚ್ ಜನತಾ ಪಾರ್ಟಿ ಅಸಲಿ ಕಥೆಯೇನು?

by Shwetha
August 3, 2026
0

ಸೂರತ್ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಮಿತ್ ತಿವಾರಿ ಅವರು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಗಂಭೀರ...

ರಾಹುಲ್ ಗಾಂಧಿ ಬಂದಿದ್ದಕ್ಕೇ ನೀರು ಬಂತು-ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ:ಕಾವೇರಿ ವಿವಾದಕ್ಕೆ ಮಾತುಕತೆಯೇ ಮದ್ದು ಎಂದ ಮಾಣಿಕಂ ಟ್ಯಾಗೋರ್

ರಾಹುಲ್ ಗಾಂಧಿ ಬಂದಿದ್ದಕ್ಕೇ ನೀರು ಬಂತು-ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ:ಕಾವೇರಿ ವಿವಾದಕ್ಕೆ ಮಾತುಕತೆಯೇ ಮದ್ದು ಎಂದ ಮಾಣಿಕಂ ಟ್ಯಾಗೋರ್

by Shwetha
August 3, 2026
0

ಕಾವೇರಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹೊತ್ತಿಸಿರುವ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಮಹತ್ವದ ಹೇಳಿಕೆ ನೀಡಿದ್ದಾರೆ....

ಮಂತ್ರಿ ಗಿರಿ ಬೇಕಾದರೆ ಹೆಚ್ಚು ಹಣ ನೀಡಬೇಕು, ರಾಹುಲ್ ಗಾಂಧಿಗೆ ಇನ್ನೂ ಸೂಟ್ ಕೇಸ್ ತಲುಪಿಲ್ಲ ಸಚಿವ ಸ್ಥಾನದ ಪೈಪೋಟಿಗೆ ಶ್ರೀರಾಮುಲು ವ್ಯಂಗ್ಯದ ಏಟು

ಮಂತ್ರಿ ಗಿರಿ ಬೇಕಾದರೆ ಹೆಚ್ಚು ಹಣ ನೀಡಬೇಕು, ರಾಹುಲ್ ಗಾಂಧಿಗೆ ಇನ್ನೂ ಸೂಟ್ ಕೇಸ್ ತಲುಪಿಲ್ಲ ಸಚಿವ ಸ್ಥಾನದ ಪೈಪೋಟಿಗೆ ಶ್ರೀರಾಮುಲು ವ್ಯಂಗ್ಯದ ಏಟು

by Shwetha
August 3, 2026
0

ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ವಿಚಾರವಾಗಿ ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram