ಡೆಲ್ಲಿ ಅಪರೂಪದ ಸಾಧನೆ ಮಾಡಿದ ಸ್ಪೈಡರ್ ಮ್ಯಾನ್ ಪಂತ್..
ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ 2,500 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದಾರೆ.
ಈ ಹಿಂದೆ ಯಾವುದೇ ದೆಹಲಿ ಆಟಗಾರರು ಈ ಮೈಲಿಗಲ್ಲನ್ನು ತಲುಪಿರಲಿಲ್ಲ. ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 43 ರನ್ ಗಳಿಸಿದ್ದ ಪಂತ್, ಡಿಸಿ ಪರ 86 ಪಂದ್ಯಗಳಲ್ಲಿ 34 ರ ಸರಾಸರಿಯಲ್ಲಿ 2542 ರನ್ ಗಳಿಸಿದ್ದಾರೆ.
ಇದರಲ್ಲಿ 15 ಅರ್ಧ ಶತಕ ಹಾಗೂ ಒಂದು ಶತಕ ಸೇರಿದೆ. ಕಳೆದ ಎರಡು ಸೀಸನ್ಗಳಲ್ಲಿ ಡಿಸಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪಂತ್, ತಂಡವನ್ನು 2020ರಲ್ಲಿ ಫೈನಲ್ಗೆ ಮತ್ತು 2021ರಲ್ಲಿ ಪ್ಲೇಆಫ್ ವರೆಗೂ ಕರೆದುಕೊಂಡು ಹೋಗಿದ್ದರು.
ಏತನ್ಮಧ್ಯೆ, ಶನಿವಾರ (ಏಪ್ರಿಲ್ 2) ರಾತ್ರಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 14 ರನ್ಗಳಿಂದ ಸೋತಿದೆ. ಮೊದಲು ಬ್ಯಾಟ್ ಮಾಡಿದ ಗುಜರಾತ್ .. ಶುಭ್ ಮನ್ ಗಿಲ್ 84 ರನ್ ನೆರವಿನೊಂದಿಗೆ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದರೆ, ಡೆಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಗಳಿಗೆ ಆಲ್ ಔಟ್ ಆಯ್ತು. ಇದರೊಂದಿಗೆ ಟೂರ್ನಿಯಲ್ಲಿ ಮೊದಲ ಸೋಲಿನ ರುಚಿ ಕಂಡಿತು. ipl-2022-rishabh-pant-2500-plus-runs-delhi-capitals