ipl-2022 | ಶ್ರೇಯಸ್ ನನ್ನ ಮದ್ವೆ ಆಗ್ತೀಯಾ…?
ಶ್ರೇಯಸ್ ಅಯ್ಯರ್.. ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟರ್.. ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ.
ದಿನದಿಂದ ದಿನಕ್ಕೆ ತಮ್ಮ ಆಟದ ಶೈಲಿಯನ್ನು ಸುಧಾರಿಸಿಕೊಂಡು ಒಂದೊಂದೆ ಹೆಜ್ಜೆಯನ್ನ ಏರುತ್ತಿರುವ ಅಯ್ಯರ್, ಬ್ಯಾಟರ್ ಆಗಿ.. ಕ್ಯಾಪ್ಟನ್ ಆಗಿ ತಮ್ಮದೇ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ.
ತಮ್ಮ ಅದ್ಭುತ ಹೊಡೆತಗಳ ಜೊತೆಗೆ ಸ್ಟೈಲಿಶ್ ಲುಕ್ನಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದರಲ್ಲಿ ಯುವತಿಯರ ಸಂಖ್ಯೆಯೂ ಹೆಚ್ಚಾಗಿದೆ.
ಈ ನಡುವೆ ಯುವತಿಯೊಬ್ಬರು ಶ್ರೇಯಸ್ ಅಯ್ಸರ್ ಅವರನ್ನು ಮದ್ವೆ ಆಗ್ತೀರಾ ಅಂತ ಪ್ರಶ್ನೆ ಮಾಡಿದ್ದಾರೆ.
ಈ ಹುಡುಗಿ ಶ್ರೇಯಸ್ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.
“ನಮ್ಮ ತಾಯಿ ಹುಡುಗನನ್ನು ಹುಡುಕಲು ಹೇಳಿದ್ದು, ನೀವು ನನ್ನನ್ನು ಮದುವೆಯಾಗುತ್ತೀರಾ, ಶ್ರೇಯಸ್ ಅಯ್ಯರ್? ” ಎಂದು ಬರೆದುಕೊಂಡು ಕೆಕೆಆರ್ ಮ್ಯಾಚ್ ನೋಡೋಕೆ ಬಂದಿದ್ದಾರೆ.
ಕೆಕೆಆರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ. ipl-2022-shreyas-iyer-gets-marriage-proposal