IPL 2022 | SRH ನ್ಯೂ ಜರ್ಸಿ ಬಗ್ಗೆ ಸಖತ್ ಟ್ರೋಲ್ ipl-2022-srh-trolls-sunrisers-hyderabad-new-jersey
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹೊಸ ಸೀಜನ್.. ಹೊಸ ಜರ್ಸಿ ಎನ್ನುತ್ತಾ ತಂಡದ ನ್ಯೂ ಜರ್ಸಿಯನ್ನು ರಿಲೀಸ್ ಮಾಡಿದೆ.
ಆರೆಂಜ್, ಬ್ಲಾಕ್ ಕಲರ್ ನಲ್ಲಿರುವ ಜರ್ಸಿಗೆ ಎಸ್ ಆರ್ ಹೆಚ್ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ಜೆರ್ಸಿಯಲ್ಲಿ ರಸ್ನಾ ವೈಬ್ಸ್ ಇದೆ ಎಂದು ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ರೆ, ಇನ್ನು ಕೆಲವರು ಫನ್ನಿ ಮೀಮ್‌ಗಳೊಂದಿಗೆ ಟ್ರೋಲ್ ಮಾಡುತ್ತಿದ್ದಾರೆ.
ಏನ್ರೋ ಇದು ಟೆಸ್ಟ್ ಮ್ಯಾಚ್ ಜೆರ್ಸಿಯನ್ನು ಆರೆಂಜ್ ಪೇಯಿಂಟ್ ನಲ್ಲಿ ಮುಳುಗಿಸಿದಂತೆ ಇದೆ ಅಂತಾ ಕಾಲೆಳೆಯುತ್ತಿದ್ದಾರೆ.
ಇದಕ್ಕಿಂತ ಹಳೆಯ ಜರ್ಸಿ ಚೆನ್ನಾಗಿತ್ತು ಅಂತಾ ಇನ್ನೂ ಕೆಲವರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅದರಲ್ಲೂ ಒಬ್ಬ ನೆಟ್ಟಿಗ ಚೆನ್ನಾಗಿದೆ ಮಜಾ, ಆದ್ರೆ 3 ಡಿ ಸರಿಯಾಗಿ ಮಾಡಿಲ್ಲ, ಅದಕ್ಕಾಗಿಯೇ ವಿಚಿತ್ರವಾಗಿ ಕಾಣುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಅಲ್ಲದೇ ಈ ಜರ್ಸಿ ಬಿಗ್ ಬ್ಯಾಷ್ ಲೀಗ್ ಪರ್ಥ್ ಸ್ಕಾರ್ಚರ್ಸ್ ಜರ್ಸಿ ರೀತಿಯಂತಿದೆ ಎನ್ನಲಾಗುತ್ತಿದೆ. ಅದರಲ್ಲೂ ಪ್ಯಾಂಟ್ ಕೂಡ ಆರೆಂಜ್ ಕಲರ್ ಇರೋದಕ್ಕೆ ಫ್ಯಾನ್ಸ್ ಫನ್ನಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಇನ್ನು ಕಳೆದ ಬಾರಿಯ ಐಪಿಎಲ್ ನಲ್ಲಿ ಎಸ್ ಆರ್ ಹೆಚ್ ತಂಡ ಕಳಫೆ ಪ್ರದರ್ಶನ ನೀಡಿತ್ತು. ಹೀಗಾಗಿ ಹೊಸ ತಂಡ ಕಟ್ಟಲು ಟೀಂ ಮ್ಯಾನೆಜ್ ಮೆಂಟ್ ಪ್ಲಾನ್ ಮಾಡಿಕೊಂಡಿದೆ.









