8 ದಾಖಲೆಗಳಿಗೆ ಸಾಕ್ಷಿಯಾಗಲಿದೆ RR vs SRH ಮ್ಯಾಚ್..!!
ಐಪಿಎಲ್ 2022 ಸೀಸನ್‌ನ ಭಾಗವಾಗಿ ಇಂದಿನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವು ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನದಲ್ಲಿ ಅವಿಸ್ಮರಣಿಯ ಪಂದ್ಯವಾಗಲಿದೆ. ಈ ಪಂದ್ಯವು ರಾಜಸ್ಥಾನ ರಾಯಲ್ಸ್ ಪರ ಸ್ಯಾಮ್ಸನ್‌ಗೆ 100 ನೇ ಪಂದ್ಯವಾಗಿದೆ. ಈ ಹಿಂದೆ, ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದ ಏಕೈಕ ಆರ್ ಆರ್ ಆಟಗಾರರಾಗಿದ್ದರು.
2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಸ್ಯಾಮ್ಸನ್ ಇದುವರೆಗೆ 121 ಪಂದ್ಯಗಳಲ್ಲಿ 134.21 ಸರಾಸರಿಯಲ್ಲಿ 3 ಶತಕ ಮತ್ತು 15 ಅರ್ಧಶತಕಗಳೊಂದಿಗೆ 3068 ರನ್ ಗಳಿಸಿದ್ದಾರೆ.
ಏತನ್ಮಧ್ಯೆ, ಸ್ಯಾಮ್ಸನ್ ಸೇರಿದಂತೆ ಹಲವಾರು ಆಟಗಾರರು SRH ವಿರುದ್ಧದ ಪಂದ್ಯದಲ್ಲಿ ಕೆಲವು ಅಪರೂಪದ ಮೈಲಿಗಲ್ಲುಗಳನ್ನು ಸೃಷ್ಟಿಸಲಿದ್ದಾರೆ.
* ದೇವದತ್ ಪಡಿಕ್ಕಲ್ ಐದು ಬೌಂಡರಿಗಳನ್ನು ಬಾರಿಸಿದರೇ ಐಪಿಎಲ್ ನಲ್ಲಿ 100 ಬೌಂಡರಿಗಳ ಗಡಿ ದಾಟಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
* ಆರ್ ಆರ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಇನ್ನೂ 32 ರನ್ ಗಳಿಸಿದ್ರ ಐಪಿಎಲ್ ನಲ್ಲಿ 2000 ರನ್ ಗಳ ಗಡಿ ತಲುಪಲಿದ್ದಾರೆ. ಇನ್ನು 6 ಬೌಂಡರಿಗಳನ್ನು ಬಾರಿಸಿದರೆ ಬಟ್ಲರ್ (194) ಐಪಿಎಲ್‌ನಲ್ಲಿ 200 ಬೌಂಡರಿಗಳ ಕ್ಲಬ್‌ಗೆ ಸೇರುತ್ತಾರೆ.
* ಇನ್ನೂ ಎರಡು ವಿಕೆಟ್ ಪಡೆದರೆ ನಾಥನ್ ಕೌಲ್ಟರ್ ನೀಲ್ 50 ವಿಕೆಟ್ ಮೈಲುಗಲ್ಲು ತಲುಪಲಿದ್ದಾರೆ.
* ಸದ್ಯ ಐಪಿಎಲ್ ನಲ್ಲಿ 145 ವಿಕೆಟ್ ಕಬಳಿಸುತ್ತಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇನ್ನು 5 ವಿಕೆಟ್ ಪಡೆದರೆ ಕ್ಯಾಶ್ರಿಚ್ ಲೀಗ್ ನಲ್ಲಿ ಅಪರೂಪದ 150 ವಿಕೆಟ್ ಕ್ಲಬ್ ಸೇರಲಿದ್ದಾರೆ.
* ಟಿ20 ಮಾದರಿಯಲ್ಲಿ ಇದುವರೆಗೆ 247 ವಿಕೆಟ್ ಪಡೆದಿರುವ ಚಹಾಲ್, ಚುಟುಕು ಕ್ರಿಕೆಟ್ ನಲ್ಲಿ 250 ವಿಕೆಟ್ ಮೈಲುಗಲ್ಲು ತಲುಪಲು ಇನ್ನೂ 3 ವಿಕೆಟ್ ಬೇಕಿದೆ.
* ಎಸ್‌ಆರ್‌ಎಚ್ ಆಟಗಾರರಾದ ಪೂರನ್ (295) ಇನ್ನೂ 5 ಸಿಕ್ಸರ್‌ಗಳನ್ನು ಬಾರಿಸಿದರೆ ಟಿ20ಯಲ್ಲಿ 300 ಸಿಕ್ಸರ್‌ಗಳ ಕ್ಲಬ್‌ಗೆ ಸೇರಲಿದ್ದಾರೆ. ಅದೇ ರೀತಿ ಅಬ್ದುಲ್ ಸಮದ್ (46) ಟಿ20ಯಲ್ಲಿ ಇನ್ನೂ 4 ಸಿಕ್ಸರ್‌ಗಳನ್ನು ಬಾರಿಸಿದರೆ 50 ಸಿಕ್ಸರ್‌ಗಳ ಕ್ಲಬ್‌ಗೆ ಸೇರುತ್ತಾರೆ.