IPL 2022 | ಯಾರು ಈ ವೈಭವ್ ಅರೋರಾ…?
ಐಪಿಎಲ್-2022ರ ಅಂಗವಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 54 ರನ್ಗಳ ಜಯ ಸಾಧಿಸಿದೆ.
ಪಂಜಾಬ್ ಕಿಂಗ್ಸ್ ಗೆಲುವಿನಲ್ಲಿ ಆ ತಂಡದ ಯುವ ಬೌಲರ್ ವೈಭವ್ ಅರೋರಾ ಪ್ರಮುಖ ಪಾತ್ರ ವಹಿಸಿದ್ರು.
ಅರೋರಾ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಬೆವರಿಳಿಸಿದರು.
ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಅರೋರಾ 21 ರನ್ ನೀಡಿ ಎರಡು ನಿರ್ಣಾಯಕ ವಿಕೆಟ್ ಪಡೆದರು.
ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿಯಂತಹ ಸ್ಟಾರ್ ಆಟಗಾರರನ್ನು ಪೆವಿಲಿಯನ್ ಗೆ ಕಳುಹಿಸುವ ಮೂಲಕ ಪಂಜಾಬ್ ಗೆ ಅರೋರಾ ಅದ್ಭುತ ಆರಂಭ ನೀಡಿದರು.
ವೇಗಿ ಸಂದೀಪ್ ಶರ್ಮಾ ಬದಲಿಗೆ ಅರೋರಾ ಅಂತಿಮ ತಂಡದಲ್ಲಿ ಸ್ಥಾನ ಪಡೆದರು. ಮತ್ತೊಂದೆಡೆ ಪಂಜಾಬ್ ತಂಡ ತೆಗೆದುಕೊಂಡ ನಿರ್ಧಾರವೇ ಸರಿ ಎಂದು ಅರೋರಾ ಸಾಬೀತುಪಡಿಸಿದರು.
ವೈಭವ್ ಅರೋರಾ ಡಿಸೆಂಬರ್ 14, 1997 ರಂದು ಅಂಬಾಲಾದಲ್ಲಿ ಜನಿಸಿದರು.
ಅರೋರಾ ರಾಷ್ಟ್ರಮಟ್ಟದಲ್ಲಿ ಹಿಮಾಚಲ ಪ್ರದೇಶದ ಪರ ಆಡುತ್ತಿದ್ದಾರೆ.
2019 ರಲ್ಲಿ ಸೌರಾಷ್ಟ್ರ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು.
ಅರೋರಾ 2021 ರಲ್ಲಿ ಛತ್ತೀಸ್ಗಢ ವಿರುದ್ಧ T20I ಪಾದಾರ್ಪಣೆ ಮಾಡಿದರು.
2020 ರ ಐಪಿಎಲ್ ಸೀಸನ್ಗೆ ಪಂಜಾಬ್ ಕಿಂಗ್ಸ್ ನೆಟ್ ಬೌಲರ್ ಅರೋರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು
ವೈಭವ್ ಅರೋರಾ 2021 ರ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ನ ಭಾಗವಾಗಿದ್ದರು. ಆದರೆ ಚೊಚ್ಚಲ ಪಂದ್ಯಕ್ಕೆ ಅವಕಾಶ ಸಿಗಲಿಲ್ಲ.
ಮೆಗಾ ಹರಾಜಿನಲ್ಲಿ ಅರೋರಾಗೆ ಪಂಜಾಬ್ ಕಿಂಗ್ಸ್ 2 ಕೋಟಿಗೆ ಖರೀದಿಸಿದೆ.
ಅರೋರಾ ತಮ್ಮ ವೃತ್ತಿಜೀವನದಲ್ಲಿ 12 ಟಿ20 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಕಬಳಿಸಿದ್ದಾರೆ. ipl-2022-who-is-vaibhav-arora