IPL 2023 Auction : ಮಿನಿ ಹರಾಜಿಗೆ ಕ್ಷಣಗಣನೆ ಶುರು, ಫ್ರಾಂಚೈಸಿಗಳು ಕಣ್ಣು ಈ ಆಟಗಾರರ ಮೇಲೆ…
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2023ರ ಆವೃತ್ತಿಗೆ ಕೌಂಟ್ ಡೌನ್ ಶುರುವಾಗಿದೆ. ಚೆನ್ನೈ ಡ್ವೇನ್ ಬ್ರಾವೋ ಮತ್ತು ಮುಂಬೈ ಇಂಡಿಯನ್ಸ್ ಕೀರಾನ್ ಪೊಲಾರ್ಡ್ ಅವರಂತಹ ದಿಗ್ಗಜ ಆಟಗಾರರನ್ನ ಕೈಬಿಟ್ಟಿದ್ದು, ಆ ಸ್ಥಾನ ತುಂಬುವ ಬದಲಿ ಆಟಗಾರರನ್ನ ಹುಡುಕುತ್ತಿವೆ.
ಶಾರ್ದೂಲ್ ಠಾಕೂರ್ ಅವರನ್ನ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಟ್ರೇಡ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಬದಲಿ ಆಟಗಾರನಿಗಾಗಿ ಹುಡುಕುತ್ತಿದೆ.
ಪರ್ಸ್ ನಲ್ಲಿ ಹೆಚ್ಚು ದುಡ್ಡು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ಸಾಕಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ಗೆ ಲಾಕಿ ಫರ್ಗುಸನ್ ಗೆ ಬದಲಿ ಆಟಗಾರನ ಅಗತ್ಯವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಬ್ಯಾಟರ್ ಗೆ ಹುಡುಕಾಡುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಈಗಾಗಲೇ ಶಾರ್ದೂಲ್, ಲಾಕಿ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರನ್ನ ತಮ್ಮ ತಂಡದಲ್ಲಿ ಸೇರಿಕೊಂಡಿದೆ. ಕೋಲ್ಕತ್ತಾಗೆ ಇದೀಗ ಡೆತ್ ಓವರ್ ಸ್ಪೆಷಲಿಸ್ಟ್ ಗಳ ಅಗತ್ಯವಿದೆ. ಪಂಜಾಬ್ ವೇಗದ ಬೌಲಿಂಗ್ ಆಲ್‌ರೌಂಡರ್‌ನ ಮೇಲೆ ಕಣ್ಣಿಟ್ಟಿದೆ, ರಾಜಸ್ಥಾನ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಾಗಿ ಹುಡುಕಾಡುತ್ತಿದೆ.
IPL 2023 Auction: Countdown to the mini auction has started, franchises are eyeing these players…