IPL 2023 Auction : ಮಯಾಂಕ್ , ಜಗದೀಸನ್ ಮೇಲೆ ಕಣ್ಣಿಟ್ಟ RCB…
IPLನಲ್ಲಿ ಸಧ್ಯದ ಮಟ್ಟಿಗೆ ಬಲಿಷ್ಟ ತಂಡ ಎಂದು ಗುರುತಿಸಿಕೊಂಡಿರುವ ಆರ್ ಸಿ ಬಿ ತಂಡಕ್ಕೆ ಆ ಒಂದು ಕೊರತೆ ಕಾಣುತ್ತಲೆ ಇದೆ. 15 ಆವೃತ್ತಿಗಳಿಂದಲೂ ಪ್ರಶಸ್ತಿ ಗೆಲುವಿನ ಬರ ಎದುರಿಸುತ್ತಿರುವ ಆರ್‌ಸಿಬಿ, 16 ನೇ ಆವೃತ್ತಿ ತಯಾರಿ ಆರಂಭಿಸಿದೆ.
2022ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್‌ಸಿಬಿ, ಪ್ಲೇ-ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಕ್ವಾಲಿಫೈಯರ್ 2 ನಲ್ಲಿ ಸೋತು ಹೊರಬಿದ್ದಿತ್ತು. ಆದರೆ ಈ ಬಾರಿ ಬಲಿಷ್ಠ ತಂಡವನ್ನ ಕಟ್ಟಿಕೊಂಡು ಕಣಕ್ಕಿಳಿಯುವ ನಿರೀಕ್ಷೆಯಲ್ಲಿದೆ ಆರ್‌ಸಿಬಿ.
ಆರ್‌ಸಿಬಿ ಬ್ಯಾಟಿಂಗ್ ಅಸ್ತ್ರವಾಗಿರುವ ವಿರಾಟ್ ಕೊಹ್ಲಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಕಣಕ್ಕಳಿದಿದ್ದ ಕೊಹ್ಲಿ, ಈ ಬಾರಿ ಮೊದಲ ಕ್ರಮಾಂಕದಲ್ಲಿ ಆಡಲು ಬಯಸಿದ್ದೇ ಆದರೆ, ಆರ್‌ಸಿಬಿಗೆ ಉತ್ತಮ ಆರಂಭಿಕ ಆಟಗಾರನ ಅಗತ್ಯವಿದೆ. ಹೀಗಾಗಿ ಆರಂಭಿಕ ಆಟಗಾರನ ಹುಡುಕಾಟದಲ್ಲಿರುವ ಆರ್‌ಸಿಬಿ, ಭಾರತೀಯ ಮೂಲದ ಆಟಗಾರನನ್ನ ಖರೀದಿಸುವ ಸಾಧ್ಯತೆ ಹೆಚ್ಚಿದೆ. ಈ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್, ಉತ್ತಮ ಆಯ್ಕೆಯಾಗಿದ್ದಾರೆ.
ಇನ್ನೂ ಕೇವಲ ಎಂಟು ಕೋಟಿ ಹೊಂದಿರುವ ಆರ್‌ಸಿಬಿ, ಎನ್. ಜಗದೀಸನ್ ಅವರನ್ನ ಕಡಿಮೆ ಮೊತ್ತಕ್ಕೆ ಖರೀದಿ ಮಾಡುವ ಸಾಧ್ಯತೆ ಸಹ ಇದೆ. ಈ ನಡುವೆ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಮನೀಷ್ ಪಾಂಡೆ ಸಹ ಉತ್ತಮ ಆಯ್ಕೆಯಾಗಿದ್ದಾರೆ.
ಇನ್ನೂ ಬೌಲಿಂಗ್ ವಿಭಾಗದಲ್ಲಿ ಡೆತ್ ಬೌಲರ್ ಹುಡುಕಾಟದಲ್ಲಿರುವ ಆರ್‌ಸಿಬಿ ವಿದೇಶಿ ಆಟಗಾರನನ್ನ ತಂಡಕ್ಕೆ ಸೆಳೆಯುವ ಲೆಕ್ಕಾಚಾರ ಹೊಂದಿದೆ. ಇಂಗ್ಲೆಂಡ್‌ನ ಎಡಗೈ ಬೌಲರ್ ಥೈಮಲ್ ಮಿಲ್ಸ್ ಈ ಪೈಕಿ ಆರ್‌ಸಿಬಿಗೆ ಉತ್ತಮ ಆಯ್ಕೆಯಾಗಲಿದ್ದಾರೆ.
IPL 2023 Auction: RCB eyeing Mayank, Jagadeesan… IPL 2023 Auction: RCB eyeing Mayank, Jagadeesan…