16ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ದೆಹಲಿಯಲ್ಲಿ ಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 31 ರನ್ ಗಳ ಸೋಲು ಅನುಭವಿಸಿತು. 12 ಪಂದ್ಯಗಳಿಂದ 4 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ. ಪಂಜಾಬ್ 12 ಪಂದ್ಯಗಳಿಂದ 12 ಅಂಕ ಸಂಪಾದಿಸಿದ್ದು
ಆರ್ಸಿಬಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ತಂಡದ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಓಪನರ್ ಪ್ರಭಾಸಿಮ್ರಾನ್ ಸಿಂಗ್ (103 ರನ್, 65 ಎಸೆತ, 10 ಬೌಂಡರಿ , 6 ಸಿಕ್ಸರ್), ಶಿಖರ್ ಧವನ್ 7, ಲಿಯಾಮ್ ಲಿವಿಂಗ್ ಸ್ಟೋನ್ 4, ಜಿತೇಶ್ ಶರ್ಮಾ 5, ಸ್ಯಾಮ್ ಕರ್ರನ್ 20, ಸಿಖಂದರ್ ರಾಝಾ ಅಜೇಯ 11 ರನ್ ಗಳಿಸಿದರು.
ಡೆಲ್ಲಿ ಪರ ಇಶಾಂತ್ ಶರ್ಮಾ 2, ಅಕ್ಸರ್ ಪಟೇಲ್, ಪ್ರವೀಣ್ ದುಬೆ ಕುಲ್ದೀಪ್ ಯಾದವ್ ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಡೆಲ್ಲಿ ಪರ ಡೇವಿಡ್ ವಾರ್ನರ್ 54, ಫಿಲ್ ಸಾಲ್ಟ್ 21, ಅಮನ್ ಖಾನ್ 16, ಪ್ರವೀಣ್ ದುಬೆ 16 ರನ್ ಗಳಿಸಿದರು. ಪಂಜಾಬ್ ಪರ ಹರಪ್ರೀತ್ ಬ್ರಾರ್ 30ಕ್ಕೆ 4 ವಿಕೆಟ್ ಪಡೆದರು. ನಾಥನ್ ಎಲ್ಲಿಸ್ ಹಾಗೂ ರಾಹುಲ್ ಚಾಹರ್ ತಲಾ 2 ವಿಕೆಟ್ ಪಡೆದರು.