ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

‘ಅಗರ್‌ ಕೋಯಿ ಚೀಸ್‌ ಕೋ ದಿಲ್‌ ಸೆ ಚಾಹೋ ಥೋ.. ಪೂರಿ ಕಾಯನಾತ್‌ ಉಸೆ ತುಮ್‌ ಸೆ ಮಿಲಾನೆ ಕಿ ಕೋಶಿಶ್‌ ಮೆ ಲಗ್ ಜಾತೆ ಹೇ..

admin by admin
February 23, 2026
in Newsbeat, Sports, ಕ್ರೀಡೆ
cmcup badminton 2026- team 9dreamz

cmcup badminton 2026- team 9dreamz

Share on FacebookShare on TwitterShare on WhatsappShare on Telegram
cmcup badminton 2026- team 9dreamz
cmcup badminton 2026- team 9dreamz

‘ಅಗರ್‌ ಕೋಯಿ ಚೀಸ್‌ ಕೋ ದಿಲ್‌ ಸೆ ಚಾಹೋ ಥೋ.. ಪೂರಿ ಕಾಯನಾತ್‌ ಉಸೆ ತುಮ್‌ ಸೆ ಮಿಲಾನೆ ಕಿ ಕೋಶಿಶ್‌ ಮೆ ಲಗ್ ಜಾತೆ ಹೇ….’ ಇದು ಹಿಂದಿಯ ಓಂ ಶಾಂತಿ ಓಂ ಚಿತ್ರದ ಡೈಲಾಗ್‌. ಈ ಡೈಲಾಗ್‌ ಅಕ್ಷರಶಃ ಸಿಎಂ ಕಪ್‌ 2026ರ ಯಶಸ್ಸಿಗೆ ಅನ್ವರ್ಥವಾದದ್ದಾಗಿದೆ.
ಸರಿಸುಮಾರು ಐದಾರು ತಿಂಗಳುಗಳಿಂದ ಸಿಎಂ ಕಪ್‌ಗಾಗಿ ಪಟ್ಟ ಪಡಿಪಾಡಲು ಅಷ್ಟಿಷ್ಟಲ್ಲ. ಅದೇ ಹೇಳ್ತಾರಲ್ಲ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ಪರಿಶ್ರಮದಿಂದ ಮಾಡಿದರೆ ಅದರಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು. ಸಿಎಂ ಕಪ್‌ ಮಾಡಬೇಕೆಂದು ನಿರ್ಧರಿಸಿ ಅದರ ಲೋಗೋ ಸಿದ್ಧಗೊಳಿಸಿ ಸಂಪರ್ಕಿಸಿದ್ದೇ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ ಅವರನ್ನು. ಸಿಎಂ ಕಪ್‌ ಆಯೋಜಿಸಬೇಕೆಂಬ ಕಲ್ಪನೆ ಹುಟ್ಟಿಕೊಂಡಾಗಿನಿಂದ ಪಂದ್ಯಾವಳಿ ಮುಗಿಯುವವರೆಗೆ ದೊಡ್ಡ ಬೆಂಬಲ ಹಾಗೂ ಬೆನ್ನೆಲುಬಾಗಿ ನಿಂತಿದ್ದೇ ಕೆ.ವಿ. ಪ್ರಭಾಕರ್‌ ಅವರು. ಅವರ ಬೆಂಬಲವಿಲ್ಲದೆ ಸಿಎಂ ಕಪ್‌ ಇಷ್ಟು ದೊಡ್ಡ ಮಟ್ಟಿಗೆ ಯಶಸ್ವಿಯಾಗುವುದು ಕಷ್ಟ ಸಾಧ್ಯ.
ಇನ್ನು, ಜನಪ್ರತಿನಿಧಿಗಳು, ಐಎಎಸ್‌/ಐಪಿಎಸ್‌, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಚಲನಚಿತ್ರ ರಂಗದವರು ಮತ್ತು ಮಾಧ್ಯಮ ಕ್ಷೇತ್ರದವರನ್ನು ಒಂದುಗೂಡಿಸಿ ಸಿಎಂ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಆಯೋಜಿಸಬೇಕೆಂಬ ಪರಿಕಲ್ಪನೆಯೊಂದಿಗೆ ಯೋಜನೆ ಆರಂಭಿಸಲಾಗಿತ್ತು. ಆದರೆ, ಕಾರ್ಯಾಂಗ, ಶಾಸಕಾಂಗದ ಪ್ರಮುಖರು ಸ್ಪರ್ಧಿಗಳಾಗಿ ಬರಲು ಒಪ್ಪುತ್ತಾರೆಯೇ, ಹಾಗೆ ಒಪ್ಪಿಸಲು ಯಾರನ್ನು ಭೇಟಿ ಮಾಡಬೇಕು, ಯಾರೆಲ್ಲ ಆಡುತ್ತಾರೆ ಎಂಬ ಮಾಹಿತಿಯೇ ನಮಗಿರಲಿಲ್ಲ. ಅಲ್ಲದೆ ದಿ ಬೆಸ್ಟ್‌ ಆಟಗಾರರನ್ನು ಕಣಕ್ಕಿಳಿಸಬೇಕೆನ್ನುವ ಆಲೋಚನೆ ನಮ್ಮದಾಗಿತ್ತು.
ಅದಕ್ಕೆ ಪುಷ್ಟಿ ನೀಡುವಂತೆ ಸಚಿವರಾದ ಡಾ. ಎಂ.ಸಿ.ಸುಧಾಕರ್‌, ವಿಧಾನಪರಿಷತ್‌ ಮಾಜಿ ಸದಸ್ಯ ನಾರಾಯಣಸ್ವಾಮಿ, ಕಾರ್ಯಾಂಗದ ಬಹುದೊಡ್ಡ ಹೆಸರಾದ ಹಿರಿಯ ಐಎಎಸ್‌ ಅಧಿಕಾರಿಗಳಾದ ಸೆಲ್ವಕುಮಾರ್‌, ಜಗದೀಶ್‌, ಐಪಿಎಸ್‌ ಅಧಿಕಾರಿಗಳಾದ ಅಲೋಕ್‌ ಕುಮಾರ್‌, ರಮೇಶ್‌ ಬಾನೋಥ್‌, ಮಿಥುನ್‌, ಕೆಎಎಸ್‌ ಅಧಿಕಾರಿಗಳಾದ ಯೋಗೀಶ್‌, ಸತೀಶ್‌, ಕೆಎಸ್‌ಪಿಎಸ್‌ ಅಧಿಕಾರಿಗಳಾದ ಪರಮೇಶ್ವರ್‌ ಹೀಗೆ ಒಬ್ಬೊಬ್ಬರೇ ಘಟಾನುಘಟಿಗಳು ನಮ್ಮ ಮನವಿಗೆ ಆಟಗಾರರಾಗಿ ಶಟಲ್‌ ಕೋರ್ಟ್‌ನಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಒಪ್ಪಿಕೊಂಡರು. ಅವರೊಂದಿಗೆ ಚಲನಚಿತ್ರ ರಂಗ ರವಿಚೇತನ್‌, ಮನೋರಂಜನ್‌, ದಿವ್ಯಾ ಉರುಡುಗ, ಕವಿತಾ ಲಂಕೇಶ್‌ ಹೀಗೆ ಹಲವರು ಜೊತೆಯಾದರು. ನಮ್ಮ ಮನವಿಯನ್ನು ಮನ್ನಿಸಿ ಸ್ಪರ್ಧಿಗಳಾಗಿ ಕಣಕ್ಕಿಳಿದ ಗಣ್ಯರೆಲ್ಲರಿಗೂ ಬಹುದೊಡ್ಡ ಧನ್ಯವಾದಗಳು.
ಇನ್ನು, ಸಿಎಂ ಕಪ್‌ ಟೂರ್ನಿ ಯಶಸ್ಸಿಗೆ ಕಾರಣರಾದ 8 ತಂಡಗಳ ಮಾಲೀಕರು, ರಾಜ್‌ ಇವೆಂಟ್ಸ್‌, ರಿಲಯನ್ಸ್‌, ಸಕ್ರಾ ವರ್ಲ್ಡ್‌ ಆಸ್ಪತ್ರೆ, ಕವಳ ಸಿನೆಮಾ ನಿರ್ಮಾಪಕರು, ಧಾರಾ ವೆಂಚರ್ಸ್‌, ಬೆಳಕು ಮೀಡಿಯಾ, ಎಸ್‌ಪಿ ಅಡ್ವಟೈಸಿಂಗ್‌ ಏಜೆನ್ಸಿ, ಕ್ಷೇಮವನ ಸೇರಿದಂತೆ ಎಲ್ಲ ಸ್ಪಾನ್ಸರ್ಸ್‌ಗಳು, ಸಿಎಂ ಕಪ್‌ನ ಪ್ರತಿ ಹಂತದ ತಯಾರಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ ಪ್ರತಿಧ್ವನಿ, ಬಾಸ್‌ ಟಿವಿ, ಸಾಕ್ಷಾ ಮೀಡಿಯಾ, ನ್ಯೂಸೋ ನ್ಯೂಸು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಹಾಗೂ ಸಿಎಂ ಕಪ್‌ನ ಪ್ರತಿ ಹಂತದ ಸುದ್ದಿಯನ್ನು ಪ್ರಸಾರ ಮತ್ತು ಪ್ರಕಟಿಸಿದ ರಾಜ್ಯದ ಎಲ್ಲ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಲಾಸ್ಟ್‌ ಸಿಪ್‌:
ಸಿಎಂ ಕಪ್‌ ಯಶಸ್ಸಿಗೆ ನಮಗೆ ಬೆಂಬಲವಾಗಿ ನಿಂತವರ ಜತೆಗೆ ಸಿಎಂ ಕಪ್‌ ಆಗದಂತೆ ತಡೆಯಲು ವ್ಯರ್ಥ ಹೋರಾಟ ನಡೆಸಿದ ಹಿತಶತ್ರುಗಳ ಪಾತ್ರವೂ ಬಹಳಷ್ಟಿದೆ. ನಮ್ಮ ಅತಿಥಿಗಳು ಕಾರ್ಯಕ್ರಮಗಳಿಗೆ ಬಾರದಂತೆ ತಡೆದವರಿದ್ದಾರೆ. ನಮಗೆ ಬೆಂಬಲವಾಗಿ ನಿಂತವರ ಬಳಿ ಬೆಂಬಲ ನೀಡದಂತೆ ಚಾಡಿ ಹೇಳಿದವರೂ ಇದ್ದಾರೆ. ಅಪಪ್ರಚಾರ ಮಾಡಿದವರೂ ಬಹಳಷ್ಟಿದ್ದಾರೆ. ಇಷ್ಟೆಲ್ಲದರ ನಡುವೆ ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಬಲ ನೀಡಿದವರಿಗೆ ಕೃತಜ್ಞನೆಗಳು.
ಆಗ ತಾನೆ ಜನಿಸಿದ ಮಗು ಮಡಿಲಲ್ಲಿ ಅಳುತ್ತಿರುವಾಗ ತಾಯಿಯ ಮುಖದಲ್ಲಿನ ನಗು, ಪ್ರಸವ ವೇದನೆ ಮರೆಸಿ ಎದೆಯೊಳಗೆ ಪ್ರೀತಿ ಹುಟ್ಟುವಂತಹ ಭಾವನೆಯೇ ಇದೀಗ ಸಿಎಂ ಕಪ್‌ ಆಯೋಜಕ ಮಂಡಳಿಯದ್ದು. ಸಿಎಂ ಕಪ್‌ 2026ರ ಯಶಸ್ಸು, ಗಣ್ಯರ ಮಾತುಗಳು ನಾವು ಪಟ್ಟ ಶ್ರಮವನ್ನೆಲ್ಲ ಮರೆಸಿದೆ, ಮುಖದಲ್ಲಿ ಸಾರ್ಥಕ ಭಾವನೆ ಮೂಡಿಸಿದೆ. ಎಲ್ಲರ ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತಾ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯ ತುಂಬಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ.

ಆಯೋಜಕ ಮಂಡಳಿ
ಸಿಎಂ ಕಪ್‌ 2026

Related posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

May 4, 2026
ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

May 4, 2026
Tags: #9dreamz#cmcup2026#cmcupbadminton2026#saakshatvbengalurukarnataka
ShareTweetSendShare
Join us on:

Related Posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

by Shwetha
May 4, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

by Shwetha
May 4, 2026
0

ಮುಂಬೈ: ಭಾರತದ ಮೇಲೆ ನಡೆದ ಸರಣಿ ವಿದೇಶಿ ಆಕ್ರಮಣಗಳು ಮತ್ತು ನೂರಾರು ವರ್ಷಗಳ ಸಂಕಷ್ಟದ ಕಾಲದಲ್ಲೂ ದೇಶದ ಮೂಲ ಗುರುತು ಹಾಗೂ ಸಾಂಸ್ಕೃತಿಕ ಆತ್ಮವನ್ನು ಸಂರಕ್ಷಿಸಿರುವುದು ಆದಿವಾಸಿ...

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

by Shwetha
May 4, 2026
0

ಕುಸ್ತಿ ಲೋಕದಲ್ಲಿ ಮತ್ತು ದೇಶದ ಕ್ರೀಡಾ ವಲಯದಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮಗೆ ಎದುರಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ...

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

by Shwetha
May 4, 2026
0

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ...

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

by Shwetha
May 4, 2026
0

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram