IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು….
ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 16 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇದೇ ಮಾರ್ಚ್ 31 ರಿಂದ ವಿದ್ಯುಕ್ತವಾಗಿ ಪ್ರಾರಂಭವಾಸಗುತ್ತಿದೆ. ಈ ಬಾರಿಯ IPL ಆರಂಭಕ್ಕೂ ಮುನ್ನ ಹಲವು ಹೊಸ ನಿಯಮಗಳನ್ನಜಾರಿ ತರಲಾಗುತ್ತಿದೆ. ಟಾಸ್ ಗೆದ್ದು ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡಬೇಕೆ ಎಂದು ನಿರ್ಧರಿಸಿದ ನಂತರ ಪ್ಲಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಲಾಗುತ್ತಿದೆ. ಟಾಸ್ ನ ನಂತರ ತಂಡಗಳು ನಾಲ್ಕು ಪ್ರಭಾವಿ ಆಟಗಾರರನ್ನ ಹೆಸರಿಸಬೇಕಾಗುತ್ತದೆ.
ಇವುಗಳಲ್ಲದೆ, ಐಪಿಎಲ್ 16 ನೇ ಸೀಸನ್ ನಲ್ಲಿಹಲವು ಬದಲಾವಣೆಗಳ ಜೊತೆಗೆ ಹೊಸ ನಿಯಮಗಳನ್ನ ಸೇರಿಸಲಾಗಿದೆ.
2 ಪ್ಲೇಯಿಂಗ್ ಇಲೆವೆನ್ ನೊಂದಿಗೆ ಬರಬಹುದು ಕ್ಯಾಪ್ಟನ್
ಐಪಿಎಲ್ ಪಂದ್ಯದ ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರು ಇದೀಗ 2 ತಂಡಗಳನ್ನ ತರಬಹುದು. ಟಾಸ್ ನಂತರ ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಿದೆಯೇ ಎಂದು ತಿಳಿದುಕೊಂಡ ನಂತರ ಪ್ಲೇಯಿಂಗ್ 11ನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮೊದಲ 15 ಸೀಸನ್ ಗಳಲ್ಲಿ ತಂಡಗಳು ಟಾಸ್ ಸಮಯದಲ್ಲಿಯೇ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳಬೇಕು. ಟಾಸ್ ಆದ ನಂತರವೂ ಇದೇ ತಂಡದೊಂದಿಗೆ ಆಡಬೇಕಿತ್ತು, ಇದೀಗ ಈ ನಿಯಮಕ್ಕೆ ಬ್ರೇಕ್ ಬಿದ್ದಿದೆ.
4 ಪ್ರಭಾವಿ ಆಟಗಾರರನ್ನ ಹೆಸರಿಸಬೇಕು
ಈ ಸೀಸನ್ನಿಂದ ಐಪಿಎಲ್ನಲ್ಲಿ ಹೊಸ ಪ್ರಭಾವಿ ಆಟಗಾರನ ನಿಯಮ ಸೇರ್ಪಡೆಯಾಗುತ್ತಿದೆ. ಟಾಸ್ ನಂತರವೇ ಎರಡೂ ತಂಡಗಳು 4-4 ಪ್ರಭಾವಿ ಆಟಗಾರರನ್ನು ಹೆಸರಿಸಬೇಕಾಗುತ್ತದೆ. ಈ 4 ಪ್ರಭಾವಿ ಆಟಗಾರರಲ್ಲಿ, ತಂಡಗಳು ಪಂದ್ಯದ ಸಮಯದಲ್ಲಿ ಯಾವುದೇ ಒಬ್ಬ ಆಟಗಾರನನ್ನ ಪ್ಲೇಯಿಂಗ್-11 ರಲ್ಲಿ ಸೇರಿಸಲಾದ ಆಟಗಾರನೊಂದಿಗೆ ಬದಲಾಯಿಸಲು ಸಾಧ್ಯವಾಗುತ್ತದೆ.
ಇಡೀ ಪಂದ್ಯದ ಸಮಯದಲ್ಲಿ ತಂಡ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯವಾಗುತ್ತದೆ. ತಂಡ ಬಯಸಿದರೆ, ಮೊದಲ ಇನಿಂಗ್ಸ್ ನ 14 ಓವರ್ಗಳವರೆಗೆ ಅಥವಾ ಎರಡನೇ ಇನಿಂಗ್ಸ್ನ 14 ನೇ ಓವರ್ ವರೆಗೆ ಬದಲಿ ಆಟಗಾರರನ್ನ ತೆಗೆದುಕೊಳ್ಳಬಹುದು.
ಐಪಿಎಲ್ನಲ್ಲಿ ಟಾಸ್ ನಂತರ ತಂಡಗಳನ್ನು ಬಿಡುಗಡೆ ಮಾಡುವ ನಿಯಮವನ್ನ ದಕ್ಷಿಣ ಆಫ್ರಿಕಾದ T20 ಲೀಗ್ SA20 ನಲ್ಲಿ ತರಲಾಗಿತ್ತು. ಅಲ್ಲಿ ಟಾಸ್ ಆದ ಬಳಿಕ ತಂಡವನ್ನ ಪ್ರಕಟಿಸುವ ನಿಯಮವನ್ನ ತರಲಾಯಿತು. ಅಲ್ಲಿ ಎರಡೂ ತಂಡಗಳ ನಾಯಕರು ಟಾಸ್ಗೆ ಮೊದಲು 13 ಆಟಗಾರರನ್ನು ಹೆಸರಿಸಬೇಕಾಗಿತ್ತು ಮತ್ತು ಟಾಸ್ ಆದ ತಕ್ಷಣ ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಾಗ ನಾಯಕ ಯಾವುದೇ 2 ಆಟಗಾರರನ್ನು ತೆಗೆದುಹಾಕಬಹುದಾದ ಆಪ್ಶನ್ ನೀಡಲಾಗಿತ್ತು.
ಅಂತ್ಯವಾಗಲಿದೆ ಟಾಸ್ ಎಫೆಕ್ಟ್
ಐಪಿಎಲ್ ನಲ್ಲಿ ಟಾಸ್ ಎಫೆಕ್ಟ್ ಹೋಗಲಾಡಿಸುವ ಉದ್ದೇಶದಿಂದ ಈ ನಿಯಮ ತರಲಾಗಿದೆ. 2019 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಭಾರತ ಮತ್ತು ವಿದೇಶದಲ್ಲಿ ನಡೆದಿತ್ತು. ನಂತರ 60 ಪಂದ್ಯಗಳ ಪೈಕಿ 34 ಪಂದ್ಯಗಳನ್ನ ಟಾಸ್ ಗೆದ್ದ ತಂಡಗಳು ಗೆದ್ದವು. ಟಾಸ್ ಸೋತ ತಂಡಗಳು 23 ಪಂದ್ಯಗಳನ್ನ ಗೆದ್ದಿದ್ದವು. ಉಳಿದ ಪಂದ್ಯಗಳು ಸೂಪರ್ ಓವರ್ ತಲುಪಿದ್ದವು.
IPL 2023 : Option to choose playing 11 after toss; Many rules are going to change….