ಹಳೆಯ ಸ್ವರೂಪಕ್ಕೆ ಮರಳಿದ IPL – ತವರಿನಲ್ಲಿ ಆಡಲಿವೆ ಟೀಮ್ ಗಳು
IPL ಅಭಿಮಾನಿಗಳಿಗ ಸೌರವ್ ಗಂಗೂಲಿ ಗುಡ್ ನ್ಯೂಸ್ ನಿಡಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ ಈಗ ತನ್ನ ಹಳೆಯ ಸ್ವರೂಪಕ್ಕೆ ಅಂದರೆ ಹೋಮ್ – ವೇ ಸ್ವರೂಪಕ್ಕೆ ಮರಳಲಿದೆ ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.
2023 IPL ನಲ್ಲಿ ಎಲ್ಲಾ 10 ತಂಡಗಳಿಗೂ ತವರು ನೆಲದಲ್ಲಿ ಆಡುವ ಅವಕಾಶ ಸಿಗಲಿದೆ. ಈ ಸಂಬಂಧ ರಾಜ್ಯ ಘಟಕಕ್ಕೆ ಮೇಲ್ ಸೌರವ್ ಗಂಗೂಲಿ ಮೇಲ್ ಮಾಡಿದ್ದಾರೆ.
ರಾಜ್ಯ ಘಟಕಗಳಿಗೆ ಕಳುಹಿಸಿರುವ ಸಂದೇಶದಲ್ಲಿ ಗಂಗೂಲಿ ಹೀಗೆ ಹೇಳಿದ್ದಾರೆ- ‘ಮುಂದಿನ ವರ್ಷದಿಂದ ನಾವು ಐಪಿಎಲ್ ಅನ್ನು ತವರು ನೆಲ ಮತ್ತು ಎದುರಾಳಿ ತಂಡದ ಮೈದಾನದಲ್ಲಿ ಆಡುವ ಮಾದರಿಯಲ್ಲಿ ಆಯೋಜಿಸುತ್ತೇವೆ. ಎಲ್ಲಾ 10 ತಂಡಗಳು ತಮ್ಮ ತವರು ಪಂದ್ಯವನ್ನು ತಮ್ಮ ನಿಗದಿತ ಸ್ಥಳದಲ್ಲಿ ಆಡುತ್ತವೆ ಎಂದು ಗಂಗೂಲಿ ಪತ್ರದಲ್ಲಿ ತಿಳಿಸಿದ್ದಾರೆ.
ಕರೋನಾ ಕಾರಣದಿಂದಾಗಿ 2 ಸೀಸನ್ ಗಳು ದಬೈ ನಲ್ಲಿ ನಡೆದಿತ್ತು. ಮತ್ತು ಕಳೆದ ಸೀಸನ್ ಮುಂಬೈ ಸೇರಿದಂತೆ ದೆಹಲಿ, ಅಹಮದಾಬಾದ್, ಮತ್ತು ಚೆನ್ನೈನಲ್ಲಿಆಯ್ದ ಜಾಗದಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರಿನಲ್ಲೂ ಸಹ ಕೊರೋನಾ ಕಾರಣ ಕಳೆದ 2 ಸೀಸನ್ಗಳು ನಡೆದಿರಲಿಲ್ಲ. 2023 ರಿಂದ ಮತ್ತೆ ಬೆಂಗಳೂರಿನಲ್ಲಿ IPL ನಡೆಯುವುದರಿಂದ RCB ಯ ಹಳೇಯ ವೈಭವ ಮತ್ತೆ ಮರುಕಳಿಸಲಿದೆ.