ಒಂದು ತಂಡಕ್ಕೆ ನಾಲ್ಕು ಆಟಗಾರರು.. ಆರ್ ಟಿಎಂ ಇಲ್ಲ.. ಬಿಸಿಸಿಐ ಹೊಸ ರೂಲ್ಸ್ BCCI saaksha tv
14ನೇ ಆವೃತ್ತಿಯ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 15 ನೇ ಆವೃತ್ತಿಯ ಐಪಿಎಲ್ ಗಾಗಿ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಮುಂದಿನ ಆವೃತ್ತಿಯ ಐಪಿಎಲ್ ನಲ್ಲಿ ಹೊಸ ತಂಡಗಳು ಸೇರ್ಪಡೆಗೊಳ್ಳಲಿದ್ದು, ಈ ಬಾರಿ ಮೆಗಾ ಆಕ್ಷನ್ ನಡೆಯಲಿದೆ.
ಪ್ರತಿ ಬಾರಿ ಮೆಗಾ ಆಕ್ಷನ್ ನಡೆಯುವಾಗ ಫ್ರಾಂಚೈಸಿಗಳಿಗೆ ನಾಲ್ವರು ಆಟಗಾರರಿಗೆ ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಜೊತೆಗೆ ಆರ್ ಟಿಎಂ ಬಳಸಿಕೊಂಡು ಆಟಗಾರರನ್ನು ಮರಳಿ ತಂಡಕ್ಕೆ ಪಡೆಯಬಹುದಾಗಿತ್ತು. ಆದ್ರೆ ಈ ಬಾರಿ ಕೆಲ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಈ ಬಾರಿ ಫ್ರಾಂಚೈಸಿಗಳಿಗೆ ಕೇವಲ ನಾಲ್ವರು ಆಟಗಾರರಿಗೆ ಉಳಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ, ಆರ್ ಟಿಎಂಗೆ ಯಾವುದೇ ರೀತಿಯ ಅವಕಾಶ ನೀಡಿಲ್ಲ. ಮೂಲಗಳ ಮಾಹಿತಿ ಪ್ರಕಾರ ಇಬ್ಬರು ಭಾರತೀಯರು, ಇಬ್ಬರು ವಿದೇಶಿ ಆಟಗಾರರು ಅಥವಾ ಮೂವರು ಭಾರತೀಯ ಪ್ಲೇಯರ್ಸ್, ಓರ್ವ ವಿದೇಶಿ ಆಟಗಾರನಿಗೆ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆಯಂತೆ.
ಈಗಾಗಲೇ ತಿಳಿದಿರುವಂತೆ 15ನೇ ಆವೃತ್ತಿಯ ಐಪಿಎಲ್ ನಲ್ಲಿ 10 ತಂಡಗಳು ಕಣಕ್ಕಿಳಿಯಲಿವೆ. ಅಹಮದಾಬಾದ್ ಹಾಗೂ ಲಖನೌ ಹೊಸ ಫ್ರಾಂಚೈಸಿಗಳಾಗಿ ಕಾಣಿಸಿಕೊಳ್ಳಬಹುದು ಎನ್ನಲಾಗ್ತಿದೆ.