IPL auction 2023 : 87 ಸ್ಲಾಟ್ ಗಳಿಗಾಗಿ 405 ಆಟಗಾರರು ಹರಾಜಿನಲ್ಲಿ ಭಾಗಿ…
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ IPL ಹರಾಜಿನಲ್ಲಿ ಒಟ್ಟು 405 ಕ್ರಿಕೆಟಿಗರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 405 ಆಟಗಾರರ ಪೈಕಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಗರಿಷ್ಠ 87 ಸ್ಲಾಟ್ ಗಳು ಲಭ್ಯವಿದ್ದು, 30 ಸ್ಲಾಟ್ ಗಳನ್ನ ವಿದೇಶಿ ಆಟಗಾರರಿಗೆ ಬಿಟ್ಟುಕೊಡಲಾಗಿದೆ. 119 ಒಟ್ಟು ಕ್ಯಾಪ್ಡ್ ಆಟಗಾರರು 282 ಅನ್ ಕ್ಯಾಪ್ಡ್ ಆಟಗಾರರು ಮತ್ತು 4 ಅಸೋಸಿಯೇಟ್ ರಾಷ್ಟ್ರಗಳಿಂದ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
2 ಕೋಟಿ ರೂ ಹರಾಜಿನಲ್ಲಿ ಅತ್ಯಧಿಕ ಮೀಸಲು ಬೆಲೆಯಾಗಿದ್ದು, 19 ಸಾಗರೋತ್ತರ ಆಟಗಾರರು ಈ ಸ್ಲಾಟ್ ನಲ್ಲಿ ಆಯ್ಕೆಯಾಗಿದ್ದಾರೆ. 11 ಆಟಗಾರರು 1.5 ಕೋಟಿ ಹರಾಜು ಪಟ್ಟಿಯಲ್ಲಿದ್ದಾರೆ. ಮನೀಶ್ ಪಾಂಡೆ ಮತ್ತು ಮಾಯಂಕ್ ಅಗರ್ವಾಲ್ ಸೇರಿ 1 ಕೋಟಿ ಮೂಲ ಬೆಲೆಯೊಂದಿಗೆ 20 ಭಾರತೀಯ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
IPL auction 2023: 405 players participate in auction for 87 slots