ಐಪಿಎಲ್-14 ಹರಾಜು ಐIಗಿಇ : ದಾಖಲೆಯ 16.25 ಕೋಟಿಗೆ ಸೇಲ್ ಆದ ಮೋರಿಸ್
ಚೆನ್ನೈ : ಚೆನ್ನೈನಲ್ಲಿ 14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ. ಕಳೆದ ವರ್ಷ ಆರ್ ಸಿಬಿ ಪರ ಆಡಿದ್ದ ಕ್ರಿಸ್ ಮೋರಿಸ್ ದಾಖಲೆ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಅವರು 16.25 ಕೋಟಿಗೆ ಆರ್ ಆರ್ ಬಳಗ ಸೇರಿದ್ದಾರೆ.
ಶಿವಂ ದುಬೆ ರಾಜಸ್ಥಾನ ತೆಕ್ಕೆಗೆ ಸೇರಿದ್ದಾರೆ. ಅವರಿಗೆ 4 ಕೋಟಿ ಕೊಟ್ಟ ಆರ್ ಆರ್ ಖರೀದಿ ಮಾಡಿದೆ.
ಇಂಗ್ಲೆಂಡ್ ತಂಡ ಸ್ಟಾರ್ ಆಟಗಾರ ಮೊಯೀನ್ ಅಲಿ ಚೆನ್ನೈ ತಂಡಕ್ಕೆ ಸೇಲ್ ಆಗಿದ್ದಾರೆ. ಅವರಿಗೆ ಚೆನ್ನೈ 7 ಕೋಟಿ ನೀಡಿದೆ.
ಬಾಂಗ್ಲಾ ಆಲ್ ರೌಂಡರ್ ಶಖೀಬ್ ಅಲ್ ಹಸನ್ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಇತ್ತ ಕಳೆದ ಐಪಿಎಲ್ ನಲ್ಲಿ ಠುಸ್ ಆಗಿದ್ದ ಕೇಧಾರ್ ಜಾಧವ್ ಅಲ್ ಸೋಲ್ಡ್ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸೀಸ್ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಗೆ14.25 ಕೋಟಿ ಕೊಟ್ಟು ಖರೀದಿ ಮಾಡಿದೆ.
ಮ್ಯಾಕ್ಸಿಗಾಗಿ ಆರ್ ಸಿಬಿ ಕೆಕೆ ಆರ್ ಚೆನ್ನೈ ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಆರ್ ಸಿಬಿ 14.25 ಕೋಟಿಗೆ ಮ್ಯಾಕ್ಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ
ಕನ್ನಡಿಗ ಕರುಣ್ ನಾಯರ್ ಅನ್ ಸೋಲ್ಡ್ ಆಗಿದ್ದಾರೆ. ಸ್ಟೀವ್ ಸ್ಮಿತ್ 2.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆಗಿದ್ದಾರೆ.
ಅಲೆಕ್ಸ್ ಹಾಲ್ಸ್ ಅನ್ ಸೋಲ್ಡ್ ಆಗಿದ್ದಾರೆ.
ಜಾಸನ್ ರೋಯ್ ಕೂಡ ಅನ್ ಸೋಲ್ಡ್ ಆಗಿದ್ದಾರೆ.
ಆರೋನ್ ಫಿಂಚ್ ಅನ್ ಸೋಲ್ಡ್ ಆಗಿದ್ದಾರೆ.
ಹನುಮ ವಿಹಾರಿ ಅನ್ ಸೋಲ್ಡ್ ಆಗಿದ್ದಾರೆ.