IPL-BCCI : ಸುಮಾರು ರೂ. 50 ಸಾವಿರ ಕೋಟಿ! ಜೂನ್ 12 ರಿಂದ ಈ–ಹರಾಜು!
ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ಬಿಸಿಸಿಐ ಟೆಂಡರ್ ನೋಟಿಸ್ ಜಾರಿ ಮಾಡಿದೆ.
ಮಂಡಳಿಯು 2023-2027 ರ ನಡುವಿನ ಐದು ವರ್ಷಗಳ ಅವಧಿಗೆ ಹಕ್ಕುಗಳನ್ನು ನೀಡುತ್ತದೆ.
ವಿಶ್ವದಾದ್ಯಂತ ಅಭಿಮಾನಿಗಳನ್ನು ರಂಜಿಸುತ್ತಿರುವ ಐಪಿಎಲ್ ನ ಮಟ್ಟ, ವ್ಯಾಲ್ಯೂ ಸಾಕಷ್ಟು ಪ್ರಮಾಣದಲ್ಲಿ ಏರಲಿದ್ದು, ಹಕ್ಕಿಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಎರಡು ಹೆಚ್ಚುವರಿ ತಂಡಗಳ ಆಗಮನದಿಂದ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿವೆ.
ಇದರೊಂದಿಗೆ ಮೀಡಿಯಾ ಹಕ್ಕುಗಳಿಂದ ಬಿಸಿಸಿಐ ಸುಮಾರು ರೂ. 50,000 ಕೋಟಿ ನಿರೀಕ್ಷಿಸುತ್ತಿದೆ.
ಝೀ–ಸೋನಿ ಮತ್ತು ರಿಲಯನ್ಸ್ ಭಾರಿ ಮೊತ್ತವಾದ್ರೂ ಪರವಾಗಿಲ್ಲ, ಹಕ್ಕುಗಳನ್ನು ಪಡೆದುಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿವೆಯಂತೆ.
ಅರ್ಜಿಗಳನ್ನು ಸ್ವೀಕರಿಸಿದ ನಂತರ, ಬಿಸಿಸಿಐ ಜೂನ್ 12 ರಿಂದ ಈ ಹರಾಜು ಪ್ರಕ್ರಿಯೆಯನ್ನು ನಡೆಸುತ್ತದೆ ಮತ್ತು ಯಾರು ಹಕ್ಕುಗಳನ್ನು ಪಡೆಯುತ್ತಾರೆ ಎಂಬುದನ್ನು ಪ್ರಕಟಿಸುತ್ತದೆ. ipl-bcci-floats-media-rights-tender